ಡೆಹರಾಡೂನ್, ಜು 14 (DaijiworldNews/MS) : ವಾಹನದ ನೋಂದಣಿ ಸಂಖ್ಯೆಯನ್ನು ಹಿಂದಿ ಪದ 'ಪಾಪಾ' ಎಂದು ಮಾದರಿಯಲ್ಲಿ ಬರೆದಿರುವ ಕಾರಿನ ನಂಬರ್ ಪ್ಲೇಟ್ನಿಂದಾಗಿ ಉತ್ತರಾಖಂಡ್ ಪೊಲೀಸರು ಕಾರಿನ ಮಾಲೀಕರಿಗೆ ದಂಡ ವಿಧಿಸಿದ್ದಾರೆ.
ಟ್ವೀಟರ್ ನಲ್ಲಿ ನಂಬರ್ ಪ್ಲೇಟ್ನ ಮೊದಲು ಮತ್ತು ನಂತರದ ಚಿತ್ರಗಳನ್ನು ಹಂಚಿಕೊಂಡ ಪೊಲೀಸರು,ಟ್ವೀಟ್ ಮೂಲಕ ದೂರನ್ನು ಸ್ವೀಕರಿಸಿದ್ದೇವೆ ಎಂದು ಹೇಳಿದ್ದಾರೆ.
"ಪಾಪಾ ಕೆಹತೇ ಹೈ ಬಡಾ ನಾಮ್ ಕರೇಗಾ, ಗಡಿ ಕಿ ಪ್ಲೇಟ್ ಪರ್ ಪಾಪ ಲಿಖೇಗಾ, ಮಗರ್ ಯೇ ತೊ ಕೋಯಿ ನಾ ಜಾನೇ, ಕಿ ಐಸಿ ಪ್ಲೇಟ್ ಪರ್ ಹೋತಾ ಹೈ ಚಲನ್ ( ನನ್ನ ಮಗ ಪ್ರಸಿದ್ಧನಾಗುತ್ತಾನೆ, ಅವನು ನಂಬರ್ ಪ್ಲೇಟ್ನಲ್ಲಿ 'ಪಪ್ಪ' ಎಂದು ಬರೆಯುತ್ತಾನೆ ಎಂದು ಪಪ್ಪ ಹೇಳುತ್ತಾರೆ, ಆದರೆ ಅಂತಹ ಫಲಕಗಳಿಗೆ ದಂಡ ವಿಧಿಸಲಾಗುತ್ತದೆ) ಎಂದು ಯಾರಿಗೂ ತಿಳಿದಿಲ್ಲ" ಎಂದು ರಾಜ್ಯ ಪೊಲೀಸರು ಫೋಟೋಗಳನ್ನು ಹಂಚಿಕೊಳ್ಳುವಾಗ ಹಿಂದಿ ಹಾಡಿನ ಶೈಲಿಯನ್ನು ಅನುಕರಿಸಿ ಬರೆದಿದ್ದಾರೆ.
ಟ್ವಿಟ್ ಮೂಲಕ ದೂರನ್ನು ಸ್ವೀಕರಿಸಿದ ನಂತರ, ಉತ್ತರಾಖಂಡ್ ಪೊಲೀಸರು ವಾಹನ ಮಾಲೀಕರನ್ನು ಟ್ರಾಫಿಕ್ ಕಚೇರಿಗೆ ಕರೆಸಿ, ನಂಬರ್ ಪ್ಲೇಟ್ ಬದಲಾಯಿಸಿ ಮತ್ತು ಮಾಲೀಕರಿಗೆ ದಂಡ ವಿಧಿಸಿದ್ದಾರೆ.