ರಾಮನಗರ, ಜು 14 (DaijiworldNews/HR): ಪಿಎಸ್ಐ ಹಗರಣದೊಂದಿಗೆ ಸಿದ್ದರಾಮಯ್ಯ ಕಾಲದ ಎಲ್ಲಾ ಹಗರಣಗಳ ತನಿಖೆಗೆ ಒತ್ತಾಯಿಸಿ ಮುಖ್ಯಮಂತ್ರಿಗೆ ಪತ್ರ ಬರೆಯುತ್ತೇನೆ ಎಂದು ಉನ್ನತ ಶಿಕ್ಷಣ ಸಚಿವ ಅಶ್ವತ್ಥನಾರಾಯಣ ಹೇಳಿದ್ದಾರೆ.
ಈ ಕುರಿತು ಮಾತನಾಡಿದ ಅವರು, ಸಿದ್ದರಾಮಯ್ಯ ಮುಖ್ಯಮಂತ್ರಿ ಆಗಿದ್ದ ವೇಳೆ ಯಾವ್ಯಾವ ತನಿಖೆಗಳು ಹೇಗೇಗೆ ನಡೆದಿವೆ ಎಂಬುದು ಗೊತ್ತಿದೆ. ಸಿದ್ದರಾಮಯ್ಯರ ಆಳ-ಅಗಲ ಎಲ್ಲವೂ ಗೊತ್ತಿದೆ ಎಂದರು.
ಇನ್ನು ಸಿದ್ದರಾಮಯ್ಯ ಅವರು ಬಿಜೆಪಿ ಸರ್ಕಾರದಿಂದಲೇ ಪಿಎಸ್ಐ ಹಗರಣ ನಡೆದಿದೆ ಎಂದು ಆರೋಪಿಸಿದ್ದು, ಇದಕ್ಕೆ ತೀರುಗೇಟು ನೀಡಿರುವ ಅಶ್ವತ್ಥನಾರಾಯಣ, ಸಿದ್ದರಾಮಯ್ಯ ಕಾಲದ ಎಲ್ಲ ಹಗರಣಗಳ ತನಿಖೆಗೆ ನಡೆಯಲೇಬೇಕು ಎಂದು ಒತ್ತಾಯಿಸಿದ್ದಾರೆ.