ಶಿವಮೊಗ್ಗ, ಜು 14 (DaijiworldNews/HR): ಶಿವಮೊಗ್ಗದ ವಿನೋಬನಗರ ಚೌಕಿ ಬಳಿ ಇಂದು ಬೆಳ್ಳಂಬೆಳಗ್ಗೆ ರೌಡಿ ಶೀಟರ್ ಓರ್ವ ಬರ್ಬರ ಹತ್ಯೆಯಾಗಿರುವ ಘಟನೆ ನಡೆದಿದೆ.
ಹತ್ಯೆಯಾದವನನ್ನು ಶಿವಮೊಗ್ಗದ ಕುಖ್ಯಾತ ರೌಡಿ ಶೀಟರ್ ಹಂದಿ ಅಣ್ಣಿ ಎಂದು ಗುರುತಿಸಲಾಗಿದೆ.
ಇನ್ನೋವಾ ಕಾರಿನಲ್ಲಿ ಬಂದ ಆರು ಜನರು ಹಂದಿ ಅಣ್ಣಿ ತಲೆ ಭಾಗಕ್ಕೆ ಮಾರಕಾಸ್ತ್ರಗಳಿಂದ ದಾಳಿ ಮಾಡಿದ ಪರಿಣಾಮ ಆತ ಸ್ಥಳದಲ್ಲಿಯೇ ಸಾವನ್ನಪ್ಪಿದ್ದಾನೆ.
ಈ ಘಟನೆ ವಿನೋಬನಗರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ನಡೆದಿದ್ದು, ಲವ ಹಾಗೂ ಕುಶ ಹತ್ಯೆ ಮಾಡಿ ಶಿವಮೊಗ್ಗದ ಭೂಗತ ಲೋಕಕ್ಕೆ ಹಂದಿ ಅಣ್ಣಿ ಕಾಲಿಟ್ಟಿದ್ದ ಎನ್ನಲಾಗಿದೆ.