ಮೈಸೂರು, ಜು 14 (DaijiworldNews/HR): ಹುಣಸೂರು, ಮೈಸೂರು ಹೆದ್ದಾರಿಯ ನಗರದ ಎಪಿಎಂಸಿ ಜಂಕ್ಷನ್ ಬಳಿ ಸ್ನೇಹಿತರ ನಡುವೆ ವಾಗ್ವಾದ ನಡೆದು ಚಾಕುವಿನಿಂದ ಇರಿದು ಹತ್ಯೆಗೈದಿರುವ ಘಟನೆ ನಡೆದಿದೆ.
ಮೃತ ಯುವಕನನ್ನು ಹುಣಸೂರು ತಾಲೂಕಿನ ಅಂಗಟಹಳ್ಳಿಯ ನಿವಾಸಿ ಬೀರೇಶ್(23) ಎಂದು ಗುರುತಿಸಲಾಗಿದ್ದು, ಹತ್ಯೆಗೈದಿರುವ ಆರೋಪಿಗಳನ್ನು ಗೋಕುಲ್ ರಸ್ತೆಯ ಕುಟ್ಟಿ ಜಿಮ್ನ ತರಬೇತುದಾರ ನಿತಿನ್ ಅಲಿಯಾಸ್ ವಠಾರ ಹಾಗೂ ಕಲ್ಕುಣಿಕೆಯ ಮನು ಎಂದು ಗುರುತಿಸಲಾಗಿದೆ.
ಇನ್ನು ಸಾಮಾಜಿಕ ಜಾಲತಾಣದಲ್ಲಿ ಪರಿಚಯವಾದ ಯುವತಿಯನ್ನು ನಾಲ್ಕು ತಿಂಗಳ ಹಿಂದೆ ಪ್ರೀತಿಸಿ ಆರೋಪಿ ನಿತಿನ್ ಮದುವೆಯಾಗಿದ್ದು, ನಿತಿನ್ ಮದುವೆ ವಿಚಾರವನ್ನ ಪ್ರಸ್ತಾಪಿಸಿ ಬಿರೇಶ್ ಹೆಂಡತಿನ ನೋಡ್ಕೊಳಕೆ ಆಗಲ್ಲಾ ಅಂದ ಮೇಲೆ ಮದುವೆ ಯಾಕ ಬೇಕು ಎಂದು ಇನ್ಸ್ಟಾಗ್ರಾಂನಲ್ಲಿ ಕೆಟ್ಟದಾಗಿ ಕಮೆಂಟ್ ಮಾಡಿದ್ದಾನೆ.
ಇದರಿಂದ ಕೋಪಗೊಂಡ ನಿತಿನ್ ಕಮೆಂಟ್ ಫೋಟೋ ತೆಗದು ಎಲ್ಲಾ ಸ್ನೇಹಿತರಿಗೂ ಕಳುಹಿಸಿದ್ದಾನೆ. ಕಳೆದ ಒಂದು ವಾರದಿಂದ ಈ ವಿಚಾರವಾಗಿ ಬಿರೇಶ್ ಮತ್ತು ನಿತಿನ್ ನಡುವೆ ಜಗಳ ನಡೆಯುತ್ತಿದ್ದು, ಇದೇ ಜಗಳ ಕೊಲೆಯಲ್ಲಿ ಅಂತ್ಯವಾಗಿದೆ.