ರೇವಾ, ಜು 14 (DaijiworldNews/HR): ಮಧ್ಯಪ್ರದೇಶದ ರೇವಾ ಜಿಲ್ಲೆಯಲ್ಲಿ ತನ್ನ ಪತ್ನಿ ಗಂಡು ಮಗುವಿಗೆ ಜನ್ಮ ನೀಡಿದ ನಂತರ ವ್ಯಕ್ತಿಯೊಬ್ಬ ಯುವಕನನ್ನು ನರಬಲಿಯಾಗಿ ಹತ್ಯೆಗೈದ ಘಟನೆ ಬೆಳಕಿಗೆ ಬಂದಿದೆ.
ದಿವ್ಯಾಂಶ್ ಕೋಲ್(19) ಎಂಬ ಯುವಕನನ್ನು ಹತ್ಯೆಗೈದ ಆರೋಪಿಯನ್ನು ಬೇಧೋವಾ ಗ್ರಾಮದ ನಿವಾಸಿ ರಾಮಲಾಲ್(32) ಎಂದು ಗುರುತಿಸಲಾಗಿದೆ.
ರಾಮ್ ಲಾಲ್ ಗೆ ಮೂರು ಹೆಣ್ಣು ಮಕ್ಕಳಿದ್ದು, ಗಂಡುಮಗುವನ್ನು ಬಯಸುತ್ತಿದ್ದ ರಾಮ್ ಲಾಲ್ ಗರ್ಭಿಣಿಯಾಗಿರುವ ಪತ್ನಿ ಗಂಡು ಮಗುವಿಗೆ ಜನ್ಮ ನೀಡಿದರೆ ಯುವಕನನ್ನು ಬಲಿ ಕೊಡುವುದಾಗಿ ಗ್ರಾಮ ದೇವತೆಗೆ ಹರಕೆ ಹೊತ್ತುಕೊಂಡಿದ್ದ.
ಇನ್ನು ಕಳೆದ ತಿಂಗಳು ರಾಮ್ ಲಾಲ್ ನ ಪತ್ನಿ ಗಂಡು ಮಗುವಿಗೆ ಜನ್ಮ ನೀಡಿದ್ದು, ತನ್ನ ಹರಕೆ ಈಡೇರಿಸಲು ಯುವಕನನ್ನು ಹುಡುಕುತ್ತಿದ್ದು, ದಿವ್ಯಾಂಶ್ ಮೇಕೆಗಳನ್ನು ಮೇಯಿಸುತ್ತಿರುವುದನ್ನು ಕಂಡ ರಾಮ್ಲಾಲ್ ಸಹಾಯಕ್ಕಾಗಿ ದಿವ್ಯಾಂಶ್ ನನ್ನು ಕರೆದು ಹಳ್ಳಿಯಲ್ಲಿರುವ ದೇವಿ ದೇವಸ್ಥಾನಕ್ಕೆ ಬರುವಂತೆ ಕೇಳಿಕೊಂಡಿದ್ದಾನೆ. ಆತನ ಮಾತು ಬಂಬಿ ದಿವ್ಯಾಂಶ್ ಜೊತೆಗೆ ಹೋಗಿದ್ದಾನೆ. ನಂತರ ರಾಮಲಾಲ್ ದಿವ್ಯಾಂಶ್ ನನ್ನು ಕಡಿದು ಕೊಲೆ ಮಾಡಿ ಶವವನ್ನು ದೇವಸ್ಥಾನದಲ್ಲಿ ಬಿಟ್ಟಿದ್ದಾನೆ ಪೊಲೀಸರು ತಿಳಿಸಿದ್ದಾರೆ.