ನವದೆಹಲಿ, ಜು 14 (DaijiworldNews/HR): ಶ್ರೀಲಂಕಾದಲ್ಲಿ ಆರ್ಥಿಕ ಬಿಕ್ಕಟ್ಟಿಗೆ ಸಿಲುಕಿರುವ ಜನರ ಪ್ರತಿಭಟನೆ ಮುಂದುವರಿದಿದ್ದು, ಲಂಕಾದ 120ಕ್ಕೂ ಹೆಚ್ಚು ವಿಮಾನಗಳು ಭಾರತದಲ್ಲಿ ಲ್ಯಾಂಡಿಂಗ್ ಆಗಿವೆ ಎಂದು ನಾಗರಿಕ ವಿಮಾನಯಾನ ಸಚಿವ ಜೋತಿರಾದಿತ್ಯ ಸಿಂಧಿಯಾ ಮಾಹಿತಿ ನೀಡಿದ್ದಾರೆ.
ಈ ಕುರಿತು ಟ್ವೀಟ್ ಮಾಡಿ ಮಾಹಿತಿ ನೀಡಿರುವ ಅವರು, ತಿರುವನಂತಪುರ ಹಾಗೂ ಕೊಚ್ಚಿ ವಿಮಾನ ನಿಲ್ದಾಣಗಳು, ವಸುದೈವ ಕುಟುಂಬಕಂ ಎಂಬ ಭಾರತದ ಪರಿಕಲ್ಪನೆಯನ್ನು ಪ್ರದರ್ಶಿಸಿದ್ದಕ್ಕೆ ಅಭಿನಂದನೆಗಳು ಎಂದಿದ್ದಾರೆ.
ಇನ್ನು ಶ್ರೀಲಂಕಾಕ್ಕೆ ಹೋಗುವ 120ಕ್ಕೂ ಹೆಚ್ಚು ವಿಮಾನಗಳಿಗೆ ತಾಂತ್ರಿಕ ಲ್ಯಾಂಡಿಂಗ್ ಮಾಡಲು ಅನುಮತಿಸುವ ಮೂಲಕ ಕರ್ತವ್ಯವನ್ನು ಮೆರೆದಿದ್ದು, ನೆರೆಯ ದೇಶದೊಂದಿಗಿನ ಈ ಬಾಂಧವ್ಯದ ಸಂಕೇತವು ಮತ್ತಷ್ಟು ವೃದ್ಧಿಸಲಿದೆ ಎಂದು ಹೇಳಿದ್ದಾರೆ.