ಬೆಂಗಳೂರು, ಜು 14 (DaijiworldNews/HR): ಆಸ್ತಿ ಮತ್ತು ಮಸೀದಿ ಪ್ರೆಸಿಡೆಂಟ್ ಸ್ಥಾನ ಸಂಬಂಧಿಸಿದ ಕಲಹದಿಂದಾಗಿ ಟಿಪ್ಪುನಗರದ ಮಾಜಿ ಕಾರ್ಪೊರೇಟರ್ ನಜೀಮಾ ಪತಿ ಆಯುಬ್ ಖಾನ್ ಅವರನ್ನು ಚಾಕುವಿನಿಂದ ಇರಿದು ಹತ್ಯೆ ಮಾಡಿರುವ ಘಟನೆ ನಡೆದಿದೆ.
ಆಯುಬ್ ಖಾನ್ ಅವರನ್ನು ತಕ್ಷಣವೇ ವಿಕ್ಟೋರಿಯ ಆಸ್ಪತ್ರೆಗೆ ದಾಖಲಿಸಾಗಿತ್ತಾದರೂ ಚಿಕಿತ್ಸೆ ಫಲಕಾರಿಯಾಗದೇ ಇಂದು ಬೆಳಗಿನ ಜಾವ ಮೃತಪಟ್ಟಿದ್ದಾರೆ.
ಇನ್ನು ಆಯುಬ್ ಖಾನ್ನನ್ನು ಆತನ ಅಣ್ಣ ಪ್ಯಾರು ಖಾನ್ರ ಮಗ ಮತೀನ್ ಎಂಬಾತನೇ ಚಾಕವಿನಿಂದ ಇರಿದು ಪರಾರಿಯಾಗಿದ್ದು, ಆತನಿಗಾಗಿ ಚಾಮರಾಜ ಪೇಟೆ ಪೊಲೀಸರು ಬಲೆ ಬೀಸಿದ್ದಾರೆ.
ಆಯುಬ್ ಸಾವು ಹಿನ್ನೆಲೆಯಲ್ಲಿ ಪೊಲೀಸರು ಟಿಪ್ಪು ನಗರ ಮತ್ತು ವಿಕ್ಟೋರಿಯಾ ಆಸ್ಪತ್ರೆ ಬಳಿ ಪೊಲೀಸರಿಂದ ಬಿಗಿ ಭದ್ರತೆಯನ್ನು ಕೈಗೊಂಡಿದ್ದಾರೆ.