ಬೆಂಗಳೂರು, ಜು 13(DaijiworldNews/MS): ಪಾರ್ಕ್ ನಲ್ಲಿ ಹೂವುಗಳನ್ನು ಕೀಳಬೇಡಿ, ಸ್ವಚ್ಚತೆ ಕಾಪಾಡಿ, ಸಾಕುಪ್ರಾಣಿಗಳಿಗೆ ಪ್ರವೇಶವಿಲ್ಲ ಎಂಬ ಬೋರ್ಡ್ ಗಳು ಸಾಮಾನ್ಯವಾಗಿ ಕಂಡುಬರುತ್ತದೆ. ಆದರೆ ಉದ್ಯಾನನಗರಿ ಎಂದೇ ಹೆಸರಾದ ಬೆಂಗಳೂರಿನ ಉದ್ಯಾನವನದಲ್ಲಿ ವಿಚಿತ್ರ ಬೋರ್ಡ್ ಒಂದು ಕಾಣಿಸಿಕೊಂಡಿದ್ದು, ಇದು ಇಂಟರ್ನೆಟ್ ಬಳಕೆದಾರರ ಗಮನ ಸೆಳೆದಿದೆ.
ರೆಡ್ಡಿಟ್ನಲ್ಲಿ ಹಂಚಿಕೊಳ್ಳಲಾದ ಚಿತ್ರದ ಬರಹದಲ್ಲಿ , ಸಾರ್ವಜನಿಕ ಉದ್ಯಾನವನದಲ್ಲಿ ಜನರು ಓಡುವುದನ್ನು, ಜಾಗಿಂಗ್ ಮಾಡುವುದು , ಹಿಮ್ಮುಖ ಪ್ರದಕ್ಷಿಣೆಯಾಗಿ ನಡೆಯುವುದನ್ನು ನಿಷೇಧಿಸುವ ಸೂಚನೆ ಇದೆ, ಬೆಂಗಳೂರು ನಗರದ ಸಾರ್ವಜನಿಕ ಸೌಲಭ್ಯಗಳು ಮತ್ತು ಮೂಲಸೌಕರ್ಯ ಸ್ವತ್ತುಗಳಿಗೆ ಜವಾಬ್ದಾರರಾಗಿರುವ ಬಿಬಿಎಂಪಿಯೂ (ಬೃಹತ್ ಬೆಂಗಳೂರು ಮಹಾನಗರ ಪಾಲಿಕೆ) - ಈ ಫಲಕ ಹಾಕಿರುವುದೆಂದು ಬರೆದಿದೆ.
ರೆಡ್ಡಿಟ್ನಲ್ಲಿ ಹಂಚಿಕೊಳ್ಳಲಾದ ಪೋಸ್ಟ್ನ ಶೀರ್ಷಿಕೆಯು "ನಾನು ಇಂದು ಉದ್ಯಾನವನದಲ್ಲಿ ಬರೆದಿರುವುದನ್ನು ನೋಡಿದ್ದೇನೆ" ಎಂದು ಬರೆಯಲಾಗಿದೆ.
ನೆಟಿಜನ್ಗಳು ಹಾಸ್ಯಮಯ ಕಾಮೆಂಟ್ ಹಾಕುತ್ತಿದ್ದು, ಓರ್ವ ಇಲ್ಲಿ "ನಾಗಿನ್ ಡ್ಯಾನ್ಸ್ ಗೆ ಅನುಮತಿಸಲಾಗಿದೆಯೇ" ವ್ಯಂಗ್ಯವಾಗಿ ಕೇಳಿದರೆ, ಮತ್ತೊರ್ವ, "ನಾನು ಇಲ್ಲಿ ಓಡುವುದನ್ನು ನೋಡಿದರೆ ಅವರು ನನ್ನನ್ನು ತಡೆಯಲು ಓಡುತ್ತಾರೆ ಅಥವಾ ನಿಲ್ಲುತ್ತಾರೆ" ಎಂದು ಪ್ರಶ್ನಿಸಿದ್ದಾರೆ. "ಮೂನ್ ವಾಕ್ ಅನುಮತಿಸಲಾಗಿದೆಯೇ?, ಅಂಬೆಗಾಲಿಡುತ್ತಾ ಹೋಗಬಹುದೇ ಹೀಗೆ ವಿಡಂಬನಾತ್ಮಕ ಪ್ರಶ್ನೆಗಳನ್ನೇ ನೆಟ್ಟಿಗರು ಕಾಮೆಂಟ್ ಮಾಡುತ್ತಿದ್ದಾರೆ.