ಮುಂಬೈ, ಜು 13 (DaijiworldNews/DB): ನಟ ಸುಶಾಂತ್ ಸಿಂಗ್ ರಜಪೂತ್ ಅತಿಯಾಗಿ ಮಾದಕ ದ್ರವ್ಯಗಳ ವ್ಯಸನಿಯಾಗಲು ರಿಯಾ ಚಕ್ರವರ್ತಿ ಕುಮ್ಮಕ್ಕು ನೀಡಿದ್ದರು ಎಂದು ಎನ್ಸಿಬಿ ಆರೋಪಪಟ್ಟಿಯಲ್ಲಿ ಉಲ್ಲೇಖಿಸಿದ ವಿಷಯ ಇದೀಗ ಬಹಿರಂಗಗೊಂಡಿದೆ.
ಸುಶಾಂತ್ ಸಿಂಗ್ ಸಾವಿಗೆ ಸಂಬಂಧಪಟ್ಟಂತೆ ಮಾದಕ ದ್ರವ್ಯ ಸೇವನೆ ವಿಚಾರವಾಗಿ ತನಿಖೆ ನಡೆಯುತ್ತಿದೆ. ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಈಗಾಗಲೇ 35 ಮಂದಿಯ ವಿರುದ್ದ ಎನ್ಸಿಬಿಯು ಒಟ್ಟು 38 ಆರೋಪಗಳನ್ನು ಹೊರಿಸಿದೆ. ಅಲ್ಲದೆ, ಆತ ಅತಿಯಾಗಿ ಡ್ರಗ್ಸ್ ಸೇವನೆ ಮಾಡಲು ರಿಯಾ ಚಕ್ರವರ್ತಿ ಕುಮ್ಮಕ್ಕು ನೀಡಿದ್ದರು ಎಂಬ ಅಂಶವನ್ನೂ ಆರೋಪಪಟ್ಟಿಯಲ್ಲಿ ಎನ್ಸಿಬಿ ಉಲ್ಲೇಖಿಸಿದೆ.
ನಟ ಸುಶಾಂತ್ ಸಾವು ಆತ್ಮಹತ್ಯೆಯೋ, ಕೊಲೆಯೋ ಎಂಬ ಬಗ್ಗೆ ಇನ್ನೂ ತನಿಖೆ ನಡೆಯುತ್ತಲೇ ಇದೆ. ಶೀಘ್ರ ತನಿಖೆಯ ತೀರ್ಪು ಹೊರ ಬೀಳಲಿದೆ ಎನ್ನಲಾಗಿದೆ.