ಸಿಂಧಗಿ , ಜು 13(DaijiworldNews/MS): ತಾಯಿಯೊಬ್ಬಳು ತನ್ನ ಇಬ್ಬರು ಮಕ್ಕಳನ್ನು ಬಾವಿಗೆ ತಳ್ಳಿ ಆತ್ಮಹತ್ಯೆ ಮಾಡಿಕೊಂಡಿರುವ ಹೃದಯ ವಿದ್ರಾವಕ ಘಟನೆ ವಿಜಯಪುರ ಜಿಲ್ಲೆಯ ಸಿಂಧಗಿಯಲ್ಲಿ ನಡೆದಿದೆ.
ಮೃತರನ್ನು ಸಿಂಧಗಿಯ ಹಂದಿಗನೂರಿನ ಅವ್ವಮ್ಮಾ ಶ್ರೀಶೈಲ ಗುಬ್ಬೆವಾಡ (32) ಎಂದು ಗುರುತಿಸಲಾಗಿದೆ. ಈಕೆ ತನ್ನ 3 ವರ್ಷದ ಹಾಗೂ 1 ವರ್ಷದ ಹೆಣ್ಣು ಮಗುವನ್ನು ಬಾವಿಗೆ ತಳ್ಳಿ ತಾನೂ ಬಾವಿಗೆ ಹಾರಿ ಆತ್ಮಹತ್ಯೆ ಮಾಡಿಕೊಂಡಿದ್ದಾರೆ.
ಪತಿ ಶ್ರೀಶೈಲ ಗುಬ್ಬೆವಾಡ ಕುರಿಮೇಯಿಸಲು ಹೋಗಿದ್ದ ಸಂದರ್ಭ ನೋಡಿ ಮಕ್ಕಳನ್ನು ಬಾವಿಗೆ ತಳ್ಳಿ ಆತ್ಮಹತ್ಯೆ ಮಾಡಿಕೊಂಡಿದ್ದಾಳೆ. ಅವ್ವಮಾ ಕಳೆದ 6 ತಿಂಗಳಿನಿಂದ ಖಿನ್ನತೆಗೆ ಒಳಗಾಗಿದ್ದಳು ಎನ್ನಲಾಗಿದೆ.
ಮೂವರು ಮೃತದೇಹಗಳನ್ನು ಬಾವಿಯಿಂದ ಗ್ರಾಮಸ್ಥರು ಹೊರತೆಗೆದಿದ್ದು, ಮರಣೋತ್ತರ ಪರೀಕ್ಷೆಗಾಗಿ ಸಿಂಧಗಿ ತಾಲೂಕು ಆಸ್ಪತ್ರೆಗೆ ಸಾಗಿಸಲಾಗಿದೆ.