ಚೈನ್ನೈ, ಜು 12 (DaijiworldNews/HR): ತಮಿಳುನಾಡು ಮುಖ್ಯಮಂತ್ರಿ ಎಂ.ಕೆ ಸ್ಟಾಲಿನ್ ಅವರಿಗೆ ಕೊರೊನಾ ಸೋಂಕು ದೃಢಪಟ್ಟಿದೆ.
ಈ ಕುರಿತು ಟ್ವಿಟ್ಟರ್ ನಲ್ಲಿ ಮಾಹಿತಿ ಹಂಚಿಕೊಂಡಿರುವ ಅವರು, ನಾನು ಇಂದು ಸ್ವಲ್ಪ ದಣಿದಿದ್ದೆ. ಪರೀಕ್ಷೆಯ ನಂತರ ನಾನು ಪ್ರತ್ಯೇಕವಾಗಿದ್ದೇನೆ. ನನಗ ಕೋವಿಡ್ ಪಾಸಿಟಿವ್ ಎಂಬುದಾಗಿ ಪರೀಕ್ಷೆಯಿಂದ ದೃಢಪಟ್ಟಿದೆ ಎಂದು ತಿಳಿಸಿದ್ದಾರೆ.
ಇನ್ನು ಮಾಜಿ ಮುಖ್ಯಮಂತ್ರಿ ಹೆಚ್ ಡಿ ಕುಮಾರಸ್ವಾಮಿಯವರಿಗೂ ನಿನ್ನೆ ಕೊರೋನಾ ದೃಢಪಟ್ಟಿದ್ದು, ಹೀಗಾಗಿ ಅವರು ಮನೆಯಲ್ಲಿಯೇ ಪ್ರತ್ಯೇಕವಾಗಿದ್ದರು.