ಮುಂಬೈ, ಜು 12 (DaijiworldNews/HR): ರಾಷ್ಟ್ರಪತಿ ಅಭ್ಯರ್ಥಿ ದ್ರೌಪದಿ ಮುರ್ಮು ಅವರನ್ನು ಬೆಂಬಲಿಸುವುದು ಎಂದರೆ ಬಿಜೆಪಿಯನ್ನು ಬೆಂಬಲಿಸುವುದು ಎಂದಲ್ಲ ಎಂದು ಸಂಸದ ಸಂಜತ್ ರಾವತ್ ಹೇಳಿದ್ದಾರೆ.
ಜುಲೈ 18ರ ಚುನಾವಣೆಯಲ್ಲಿ ಬಿಜೆಪಿ ನೇತೃತ್ವದ ಎನ್ಡಿಎ ಅಭ್ಯರ್ಥಿ ದ್ರೌಪದಿ ಮುರ್ಮು ಅವರನ್ನು ಶಿವಸೇನೆ ಬೆಂಬಲಿಸುತ್ತದೆ ಎಂದು ಮೂಲಗಳು ತಿಳಿಸಿವೆ.
ಇನ್ನು ಪಕ್ಷದ 22 ಸಂಸದರಲ್ಲಿ 16 ಮಂದಿ ಉದ್ಧವ್ ಠಾಕ್ರೆ ಅವರೊಂದಿಗಿನ ಸಭೆಯಲ್ಲಿ ಭಾಗವಹಿಸಿದ ಒಂದು ದಿನದ ನಂತರ ದ್ರೌಪತಿ ಮುರ್ಮು ಅವರನ್ನು ಬೆಂಬಲಿಸುವ ನಿರ್ಧಾರವು ಹೊರಬಿದ್ದಿದೆ.
ಮುರ್ಮು ಅವರು ಬುಡಕಟ್ಟು ಸಮುದಾಯದ ಮಹಿಳೆಯಾಗಿರುವುದರಿಂದ ಅವರಿಗೆ ಮತ ಹಾಕಬೇಕೆಂದು ಸಭೆಯಲ್ಲಿ ಬಹುತೇಕರು ಹೇಳಿದ್ದಾರೆ. ಹೀಗಾಗಿ ದ್ರೌಪತಿ ಮುರ್ಮುರನ್ನು ಬೆಂಬಲಿಸುತ್ತಿದ್ದೇವೆ. ಹಾಗೆಂದ ಮಾತ್ರಕ್ಕೆ ನಮ್ಮ ಬೆಂಬಲ ಬಿಜೆಪಿಗಿದೆ ಎಂದೆಲ್ಲ ಎಂದು ಸಂಜತ್ ರಾವತ್ ಹೇಳಿದ್ದಾರೆ.