ಹುಬ್ಬಳ್ಳಿ, ಜು 12 (DaijiworldNews/HR): ಹಳೇಹುಬ್ಬಳ್ಳಿ ಹೆಗ್ಗೇರಿಯಲ್ಲಿ ಮಗನ ಅತಿಯಾದ ಕಿರುಕುಳಕ್ಕೆ ರೋಸಿಹೋದ ತಂದೆ ಚಾಕುವಿನಿಂದ ಮಗನನ್ನು ಇರಿದು ಗಾಯಗೊಳಿಸಿದ ಘಟನೆ ನಡೆದಿದೆ.
ಕ್ಷೌರಿಕ ಕೆಲಸ ಮಾಡಿಕೊಂಡಿದ್ದ ಶಂಕರ ಸುಗೂರ ಎಂಬವರು ತನ್ನ ಮಗ ಜಗದೀಶ ಸುಗೂರನಿಗೆ ಇರಿದು ಹಲ್ಲೆ ಮಾಡಿದ್ದಾರೆ.
ಇನ್ನು ಜಗದೀಶನು ಮಾನಸಿಕ ತೊಂದರೆಯಿಂದ ಬಳಲುತ್ತಿದ್ದು, ತಂದೆ-ತಾಯಿಗೆ ಪದೇ ಪದೇ ಅವಾಚ್ಯ ಶಬ್ದಗಳಿಂದ ನಿಂದನೆ ಮಾಡುವುದು ಹಾಗೂ ಜಗಳ ಮಾಡುವುದು, ಕೈಗೆ ಸಿಕ್ಕ ವಸ್ತುಗಳನ್ನು ಒಗೆಯುವುದು, ಹೊಡೆಯುವುದು ಮಾಡುತ್ತಿದ್ದ ಎನ್ನಲಾಗಿದೆ.
ಈ ಬಗ್ಗೆ ಹಳೇಹುಬ್ಬಳ್ಳಿ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.