ಪಣಜಿ, ಜು 12 (DaijiworldNews/HR): ಬಿಜೆಪಿ ಜೊತೆ ಸಂಪರ್ಕದಲ್ಲಿದ್ದಾರೆ ಎಂಬ ಆರೋಪ ಹೊತ್ತಿದ್ದ ಕಾಂಗ್ರೆಸ್ ಶಾಸಕ ಮೈಕೆಲ್ ಲೋಬೋ ಅವರು ನಾವು ಕಾಂಗ್ರೆಸ್ ಜೊತೆಗೇ ಇದ್ದೇವೆ ಎಂದು ಹೇಳುವ ಮೂಲಕ ಬಿಜೆಪಿ ಸೇರುವ ಸಾಧ್ಯತೆಯನ್ನು ತಳ್ಳಿಹಾಕಿದ್ದಾರೆ.
ಕಾಂಗ್ರೆಸ್ ಪಕ್ಷವು ವಿಪಕ್ಷ ನಾಯಕನ ಸ್ಥಾನದಿಂದ ಮೈಕಲ್ ಲೋಬೋ ಅವರನ್ನು ವಜಾಗೊಳಿಸಿದ್ದು, ಲೋಬೋ ಹಾಗೂ ಮಾಜಿ ಸಿಎಂ ದಿಗಂಬರ್ ಕಾಮತ್ ಅವರು ಬಿಜೆಪಿಯ ಜೊತೆ ಹೊಂದಾಣಿಕೆ ಮಾಡಿಕೊಂಡಿದ್ದಾರೆ ಎಂದು ಆರೋಪಿಸಿತ್ತು.
ಇನ್ನು ಈ ಬಗ್ಗೆ ಪ್ರತಿಯಿಸಿದ ಮೈಕೆಲ್ ಲೋಬೋ, ನನ್ನನ್ನು ವಜಾಗೊಳಿಸಿರುವುದಕ್ಕೆ ಕಾರಣ ಗೊತ್ತಿಲ್ಲ. ದಕ್ಷಿಣ ಗೋವಾದಲ್ಲಿ ಎಲ್ಲಾ ಶಾಸಕರೂ ಒಟ್ಟಿಗೇ ಇದ್ದೆವು ಎಂದಿದ್ದಾರೆ.