ನವದೆಹಲಿ, ಜು 12 (DaijiworldNews/HR): ಆಲ್ಟ್ ನ್ಯೂಸ್ ಸಹ ಸಂಸ್ಥಾಪಕ ಮೊಹಮ್ಮದ್ ಜುಬೈರ್ ಅವರು ಸಲ್ಲಿಸಿದ್ದ ಜಾಮೀನು ಅರ್ಜಿಯ ವಿಚಾರಣೆಯನ್ನು ಜುಲೈ 14ಕ್ಕೆ ದೆಹಲಿ ನ್ಯಾಯಾಲಯ ಮುಂದೂಡಿದೆ.
ಮೊಹಮ್ಮದ್ ಜುಬೈರ್ ಅವರು 2018ರಲ್ಲಿ ಹಿಂದೂ ಧಾರ್ಮಿಕ ಭಾವನಗೆ ಧಕ್ಕೆ ತರುವಂತಹ ಆಕ್ಷೇಪಾರ್ಹ ಟ್ವೀಟ್ ಮಾಡಿದ್ದು, ಈ ಆರೋಪದ ಮೇಲೆ ಇತ್ತೀಚೆಗೆ ಅವರನ್ನು ಬಂಧಿಸಲಾಗಿತ್ತು.
ಇನ್ನು ಜುಬೈರ್ ಪ್ರಕರಣ ಸಂಬಂಧ ವಿಸ್ತೃತ ವಾದಕ್ಕೆ ಕಾಲಾವಕಾಶ ಕೋರಿ ತನಿಖಾಧಿಕಾರಿ ಮಾಡಿದ ಮನವಿಯನ್ನು ಪರಿಗಣಿಸಿ, ಹೆಚ್ಚುವರಿ ಸೆಷನ್ಸ್ ನ್ಯಾಯಾಧೀಶ ದೇವೇಂದರ್ ಕುಮಾರ್ ಜಂಗಾಲ ಅವರು ವಿಚಾರಣೆಯನ್ನು ಮುಂದೂಡಿದ್ದಾರೆ.