ನವದೆಹಲಿ, ಜು 12 (DaijiworldNews/MS): ಕಾಂಗ್ರೆಸ್ ಮಾಜಿ ಅಧ್ಯಕ್ಷ ಮತ್ತು ವಯನಾಡ್ ಲೋಕಸಭಾ ಸಂಸದ ರಾಹುಲ್ ಗಾಂಧಿ ವಿದೇಶ ಪ್ರವಾಸ ಕೈಗೊಂಡಿದ್ದಾರೆ ಎಂದು ಪಕ್ಷದ ಮೂಲಗಳು ತಿಳಿಸಿವೆ.
ವಿದೇಶ ಪ್ರವಾಸಕ್ಕಾಗಿ ರಾಹುಲ್ ಇಂದು ವಿಮಾನವನ್ನೇರಿದ್ದು, ಜುಲೈ 17 ರ ಭಾನುವಾರದೊಳಗೆ ಭಾರತಕ್ಕೆ ಮರಳಲಿದ್ದಾರೆ ಎಂದು ವರದಿಯಾಗಿದೆ.
ರಾಹುಲ್ ಗಾಂಧಿಯವರು ವೈಯಕ್ತಿಕ ವಿದೇಶ ಅಥವಾ ಅಧಿಕೃತ ಪ್ರವಾಸಕ್ಕಾಗಿ ತೆರಳಿದ್ದಾರಾ ಎಂಬುದು ಇನ್ನೂ ಸ್ಪಷ್ಟವಾಗಿಲ್ಲ.
ಇನ್ನು ಸಂಸತ್ತಿನ ಮುಂಗಾರು ಅಧಿವೇಶನ ಸೋಮವಾರ (ಜುಲೈ 18) ಆರಂಭವಾಗಲಿದ್ದು, ರಾಷ್ಟ್ರಪತಿ ಚುನಾವಣೆ ಕೂಡ ಸೋಮವಾರ ನಡೆಯಲಿದ್ದು, ಜುಲೈ 21 ರಂದು ಮತ ಎಣಿಕೆ ನಡೆಯಲಿದೆ.