ಉತ್ತರಕನ್ನಡ, ಜು 12 (DaijiworldNews/HR): ಉತ್ತರ ಕನ್ನಡ ಜಿಲ್ಲೆಯ ಹಳಿಯಾಳ ತಾಲೂಕಿನ ಮುರ್ಕವಾಡ ಗ್ರಾಮದಲ್ಲಿ ಮನೆ ಗೋಡೆ ಕುಸಿದು ಮಲಗಿದ್ದಲ್ಲೇ ತಾಯಿ-ಮಗಳು ಮೃತಪಟ್ಟ ಘಟನೆ ಮಂಗಳವಾರ ಬೆಳಗಿನಜಾವ ನಡೆದಿದೆ.
ರುಕ್ಮಿಣಿ ವಿಠ್ಠಲ್ ಮಾಚಕ(37) ಮತ್ತು ಇವರ ಪುತ್ರಿ ಶ್ರೀದೇವಿ ವಿಠ್ಠಲ್ ಮಾಚಕ(13) ಮೃತರು.
ಜಿಲ್ಲೆಯಲ್ಲಿ ನಿರಂತರ ಮಳೆ ಸುರಿಯುತ್ತಿರುವ ಹಿನ್ನಲೆಯಲ್ಲಿ ಇವರು ವಾಸವಿದ್ದ ಮಣ್ಣಿನ ಮನೆಯ ಗೋಡೆ ಕುಸಿದಿದ್ದು, ಮಲಗಿದ್ದಲ್ಲೇ ಅಮ್ಮ-ಮಗಳು ಸಾವನ್ನಪ್ಪಿದ್ದಾರೆ.
ಇನ್ನು ವಿಷಯ ತಿಳಿದು ಸ್ಥಳಕ್ಕೆ ತಹಸೀಲ್ದಾರ್ ಪ್ರಕಾಶ ಗಾಯಕವಾಡ, ತಾಪಂ ಇಒ ಪರಶುರಾಮ್ ಗಸ್ತಿ ಹಾಗೂ ಅಧಿಕಾರಿಗಳ ತಂಡ ಭೇಟಿ ನೀಡಿ ಪರಿಶೀಲನೆ ನಡೆಸಿತು.