ಹಾಸನ, ಜು 12 (DaijiworldNews/HR): ಭಾರೀ ಮಳೆಯಿಂದಾಗಿ 2ದಿನಗಳ ಹಿಂದೆಯಷ್ಟೇ ಘಾಟಿಯಲ್ಲಿ ಗುಡ್ಡ ಕುಸಿತಗೊಂಡು ಮಣ್ಣು ಹಾಗೂ ಮರ ಬಿದ್ದಿದ್ದು ವಾಹನ ಸಂಚಾರವನ್ನೆ ಸ್ಥಗಿತ ಮಾಡಲಾಗಿದ್ದು, ಕಾರ್ಯಾಚರಣೆ ಬಳಿಕ ಇಂದಿನಿಂದ ಆಗುಂಬೆ ಘಾಟಿಯಲ್ಲಿ ಸಂಚಾರಕ್ಕೆ ಅವಕಾಶ ನೀಡಲಾಗಿದೆ.
ಆಗುಂಬೆ ಘಾಟಿಯಲ್ಲಿ ರಸ್ತೆಯಲ್ಲಿ ಅಪಾರ ಪ್ರಮಾಣದ ಮಣ್ಣು ಹಾಗೂ ಮರ ಬಿದ್ದು ಸಂಚಾರವೇ ಅಸ್ತವ್ಯಸ್ಥಗೊಂಡಿದ್ದು ಬಂದ್ ಆಗಿದ್ದ ರಸ್ತೆ ತೆರವು ಕಾರ್ಯಾಚರಣೆ ಅಂತ್ಯಗೊಂಡಿದೆ.
ಇನ್ನು ಇಂದಿನಿಂದ ಲಘು ವಾಹನಗಳ ಸಂಚಾರಕ್ಕೆಅವಕಾಶ ನೀಡಲಾಗಿದ್ದು, ಶಿವಮೊಗ್ಗದಿಂದ ಉಡುಪಿ ಸಂಪರ್ಕಿಸುವ ಪ್ರಮುಖ ರಸ್ತೆ ಇದಾಗಿದೆ.