ಬೆಂಗಳೂರು, ಜು 11 (DaijiworldNews/HR): ಬೆಂಗಳೂರು ನಗರದಲ್ಲಿ ನಾಯಿ ಹಾವಳಿ ಬಗ್ಗೆ ಸಾಕಷ್ಟು ದೂರು ಬರುತ್ತಿದ್ದು, ಪ್ರತಿ ದಿನ 300 ರಿಂದ 400 ನಾಯಿಗಳಿಗೆ ವ್ಯಾಕ್ಸಿನ್ ಹಾಕಲಾಗುವುದು ಎಂದು ಪಶು ಸಂಗೋಪನಾ ಸಚಿವ ಪ್ರಭು ಚೌಹಾಣ್ ಹೇಳಿದ್ದಾರೆ.
ಈ ಕುರಿತು ಮಾತನಾಡಿದ ಅವರು, ನಾಯಿ ಹಾವಳಿ ಕುರಿತು ಸಾಕಷ್ಟು ದೂರು ಬರುತ್ತಿದ್ದು, ಬಿಬಿಎಂಪಿ ಆಯುಕ್ತರ ಜೊತೆ ಸಭೆ ಮಾಡುತ್ತೇನೆ. ಬಿಬಿಎಂಪಿ ವ್ಯಾಪ್ತಿಯಲ್ಲಿ ಸುಮಾರು ಮೂರು ಲಕ್ಷ ನಾಯಿಗಳಿದ್ದು, ದಿನಕ್ಕೆ 240 ನಾಯಿಗಳಿಗೆ ವ್ಯಾಕ್ಸಿನ್ ಆಗುತ್ತಿದೆ ಎಂದರು.
ಇನ್ನು ಬೀದಿ ನಾಯಿಗಳ ಹಾವಳಿ ತಡೆಗೆ ಎನ್ಜಿಒಗಳೂ ಕೂಡ ಸಹಕಾರ ನೀಡುತ್ತಿದ್ದು, ನಾಯಿ ಕಡಿತದಿಂದ ಸಾವಾದರೆ 50 ಸಾವಿರದಿಂದ ಒಂದು ಲಕ್ಷ ರೂಪಾಯಿಗಳ ಪರಿಹಾರವನ್ನು ನೀಡಲಾಗುತ್ತಿದೆ ಎಂದು ಹೇಳಿದ್ದಾರೆ.