ಬೆಂಗಳೂರು, ಜು 11 (DaijiworldNews/HR): ಭಾರತದ ಯುವಕರಲ್ಲಿ ರಾಜಕೀಯ, ಆರ್ಥಿಕ, ಸಾಮಾಜಿಕ ಕ್ಷೇತ್ರದಲ್ಲಿ ಬದಲಾವಣೆ ತರುವ ಶಕ್ತಿಯಿದೆ. ಆದರೆ ಮೋದಿ ಸರ್ಕಾರದಿಂದಾಗಿ ದೇಶದಲ್ಲಿ ನಿರುದ್ಯೋಗ ತಾಂಡವಾಡುತ್ತಿದೆ ಎಂದು ವಿಪಕ್ಷ ನಾಯಕ ಸಿದ್ದರಾಮಯ್ಯ ವಾಗ್ದಾಳಿ ನಡೆಸಿದ್ದಾರೆ.
ಈ ಕುರಿತು ಮಾತನಾಡಿದ ಅವರು, ದೇಶದ ಜನಸಂಖ್ಯೆಯಲ್ಲಿ 30 ವರ್ಷದ ಒಳಗಿನ ಯುವಕ ಯುವತಿಯರು 60% ಇದ್ದಾರೆ. ಭಾರತದಲ್ಲಿ 107 ಕೋಟಿ ಜನರಿಗೆ ಕೆಲಸ ಮಾಡುವ ಶಕ್ತಿ ಇದೆ. ಆದರೆ 107 ಕೋಟಿಯಲ್ಲಿ 40% ಒಳಗೆ ಜನರಿಗೆ ಮಾತ್ರ ಕೆಲಸವಿದೆ. ಮೋದಿ ಪ್ರಧಾನಿಯಾದ ಮೇಲೆ ಯುವಕರಿಗೆ ಕೆಲಸವೇ ಇಲ್ಲ ಎಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಇನ್ನು ಯುವ ಶಕ್ತಿ ಇರುವ ನಮ್ಮ ದೇಶದಲ್ಲಿ ನಿರುದ್ಯೋಗ ತಾಂಡವಾಡುತಿದ್ದು, ನಗರದಲ್ಲಿ ಪ್ರದೇಶ 9% ಹಾಗೂ ಗ್ರಾಮೀಣ ಪ್ರದೇಶದಲ್ಲಿ 6 % ನಿರುದ್ಯೋಗ ಸಮಸ್ಯೆ ಉಂಟಾಗಿದೆ. ಬಿಜೆಪಿ ನಾಯಕ ಸುಬ್ರಹ್ಮಣ್ಯನ್ ಸ್ವಾಮಿ ಖುದ್ದಾಗಿ ಟ್ವೀಟ್ ಮಾಡಿ 2011 ರಲ್ಲಿ ವಿಶ್ವದ ಆರ್ಥಿಕತೆಯಲ್ಲಿ ಭಾರತ 3ನೇ ಸ್ಥಾನದಲ್ಲಿತ್ತು, ಇವಾಗ ಮೋದಿ ಪ್ರಧಾನಿಯಾದ ಮೇಲೆ ವಿಶ್ವದ ಆರ್ಥಿಕತೆಯಲ್ಲಿ ಭಾರತ 164 ಸ್ಥಾನ ಪಡೆದಿದೆ ಎಂದಿದ್ದಾರೆ ಎಂದರು.