ಮುಂಬೈ, ಜು 11(DaijiworldNews/MS): ಆಹಾರ ವಿತರಣಾ ಕಂಪನಿ ಸ್ವಿಗಿಯೂ "ನಿಗೂಢ ವ್ಯಕ್ತಿ " ಯನ್ನು ಗುರುತಿಸುವಲ್ಲಿ ಯಶಸ್ವಿಯಾಗಿದೆ. ಬೆನ್ನಿಗೆ ಸ್ವಿಗ್ಗಿ ಬ್ಯಾಗ್ ಬೆನ್ನಿಗೆ ಏರಿಸಿಕೊಂಡು ಕುದುರೆಯ ಮೇಲೆ ಏರಿದ್ದ ಡೆಲಿವರಿ ಏಜೆಂಟ್ಗಾಗಿ ಕಠಿಣ ಹುಡುಕಾಟವು ಕೊನೆಗೂ ಅಂತ್ಯಗೊಂಡಿದೆ ಎಂದು ಹೇಳಿದೆ.
ಅಪರಿಚಿತ ವ್ಯಕ್ತಿಯೊಬ್ಬ ಕುದುರೆಯ ಮೇಲೆ ಸವಾರಿ ಮಾಡುತ್ತಾ ಸ್ವಿಗಿಯ ಬ್ಯಾಗ್ ಏರಿಸಿಕೊಂಡು ಆಹಾರ ವಿತರಿಸಲು ಹೋಗುತ್ತಿರುವ ಇತ್ತೀಚಿನ ವೈರಲ್ ವೀಡಿಯೊ ಇಂಟರ್ನೆಟ್ನಲ್ಲಿ ಸಾಕಷ್ಟು ಸಂಚಲನವನ್ನು ಸೃಷ್ಟಿಸಿತ್ತು. ಇದು ಎಷ್ಟರಮಟ್ಟಿಗೆಂದರೆ, ವ್ಯಕ್ತಿಯನ್ನು ಗುರುತಿಸಲು ಸಾಧ್ಯವಾಗುವ ಯಾರಿಗಾದರೂ 5000 ರೂಪಾಯಿಗಳ ಬಹುಮಾನವನ್ನು ನೀಡಲು ಸ್ವಿಗ್ಗಿ ಮುಂದಾಗಿತ್ತು.
“ಆ ಕುದುರೆಯು ಚಂಡಮಾರುತವೋ ಅಥವಾ ಮಿಂಚೋ? ಆ ಯುವಕನ ಬೆನ್ನಿನ ಚೀಲದಲ್ಲಿ ಏನಿದೆ? ಮಳೆಗಾಲದಲ್ಲಿ ಮುಂಬೈನ ಆ ರಸ್ತೆಯನ್ನು ದಾಟಲು ಏಕೆ ಬಯಸಿದ್ದ? ಅವನು ಆರ್ಡರ್ ನೀಡಲು ಹೋದಾಗ ಅವನು ಕುದುರೆಯನ್ನು ಎಲ್ಲಿ ನಿಲ್ಲಿಸಿದ್ದ? ಈ ಯುವಕ ಯಾರು? ” ಎಂದು ಸ್ವಿಗ್ಗಿ ತಮ್ಮ ಟ್ವೀಟ್ನಲ್ಲಿ ಪ್ರಶ್ನೆಗಳ ಸುರಿಮಳೆ ಕೇಳಿ ಆ ನಿಗೂಢ ಮುಂಬೈ ರಸ್ತೆಗಳಲ್ಲಿ ಹೋಗುತ್ತಿದ್ದ ಈ ಆಹಾರವನ್ನು ನಿಖರವಾಗಿ ತಲುಪಿಸುವ ರಾಜಕುಮಾರ ಯಾರು?" ಎಂಬ ಪ್ರಶ್ನೆಗಳನ್ನು ಸ್ವಿಗಿ ಮುಂದಿಟ್ಟು ಆತನನ್ನು ಹುಡುಕಲು ಹೊರಟಿತ್ತು.
ಇದೀಗ ನೆಟ್ತಿಗರ ಕುತೂಹಲಕ್ಕೆ ಸ್ವಿಗಿ ಫುಲ್ ಸ್ಟಾಪ್ ಹಾಕಿದ್ದು "ಕುದುರೆ ಬೇಟೆಯನ್ನು ಕೊನೆ"ಗೊಳಿಸಿದ ಸ್ವಿಗಿ ಈ ಬಗ್ಗೆ ವಿವರಣೆ ನೀಡಿದೆ. ಪ್ರಶ್ನೆ-ಉತ್ತರ ಸ್ವರೂಪದಲ್ಲಿ ಪತ್ರಿಕಾ ಪ್ರಕಟಣೆಯನ್ನು ಹಂಚಿಕೊಂಡಿದ್ದು ಇದು ನೆಟ್ಟಿಗರ ಎಲ್ಲಾ ಅನುಮಾನಗಳನ್ನು ಬಗೆಹರಿಸಿದೆ.
ಈ ಕುದುರೆ-ಬೇಟೆಯ ಸಮಯದಲ್ಲಿ ಯಾವುದೇ ಪ್ರಾಣಿಗಳಿಗೆ ಗಾಯವಾಗಿಲ್ಲ, ಎಂದು ವಿನೋಧಮಯವಾಗಿ ಬರೆದುಕೊಂಡಿರುವ ಸ್ವಿಗ್ಗಿ ನೆಟ್ಟಿಗರು ಕರೆದಂತೆ ಕುದುರೆಯ ಹೆಸರು "ತೂಫಾನ್" ಅಥವಾ "ಬಿಜ್ಲಿ" ಅಲ್ಲ..ಬದಲಾಗಿ ನೀವು ಕುದುರೆಯ ಲಿಂಗ ತೀರ್ಮಾನ ಮಾಡೋ ಮೊದಲು , ಕುದುರೆಯ ಹೆಸರು ಶಿವ ಎಂದು ನಾವು ಖಚಿತಪಡಿಸಲು ಬಯಸುತ್ತೇವೆ .
ಅದರ ಮೇಲಿದ್ದ ಯುವಕ 17 ವರ್ಷದ ಸುಶಾಂತ್. ಅವನು ಸ್ವಿಗ್ಗಿ ಡೆಲಿವರಿ ಎಕ್ಸಿಕ್ಯೂಟಿವ್ ಅಲ್ಲ. ವಸ್ತುಗಳನ್ನು ಎರವಲು ಪಡೆದು ಹಿಂದಿರುಗಿಸಲು ಮರೆಯುವ ಸಾಮಾನ್ಯ ಹದಿಹರೆಯದ ಬಾಲಕನಾಗಿದ್ದಾನೆ. ಈ ಸಂದರ್ಭದಲ್ಲಿ, ಅವನು ಎರವಲು ಪಡೆದು ಹಿಂತಿರುಗಿಸಲು ಮರೆತದ್ದು ಸ್ವಿಗ್ಗಿ ಡೆಲಿವರಿ ಬ್ಯಾಗ್..! ಈತ ಮುಂಬೈನಲ್ಲಿ, ಮದುವೆಯ ಮೆರವಣಿಗೆಗಳಿಗೆ ಕುದುರೆ ಉಡುಗೆ ತೊಡುಗೆ ಧರಿಸುವ ಜವಬ್ದಾರಿಯನ್ನು ನೋಡಿಕೊಳ್ಳುತ್ತಾನೆ. ..ಈ ಕುದುರೆಯನ್ನು ಮದುವೆಯ ಮೆರವಣಿಗೆಗಳಿಗೆ ಬಳಸಲಾಗುತ್ತದೆ.
ವೀಡಿಯೊ ವೈರಲ್ ಆದ ಅದೃಷ್ಟದ ದಿನದಂದು, ಸುಶಾಂತ್ ಮದುವೆಯಿಂದ ಮನೆಗೆ ಮರಳುತ್ತಿದ್ದರು ಮತ್ತು ವೀಡಿಯೊವನ್ನು ಅವಿ ಎಂಬ ವ್ಯಕ್ತಿ ಸೆರೆಹಿಡಿದಿದ್ದಾರೆ ಮತ್ತು ಅವರಿಗೆ ನಾವು ಭರವಸೆ ನೀಡಿದಂತೆ 5000 ಬಹುಮಾನದ ಹಣವನ್ನು ನೀಡಿದ್ದೇವೆ" ಎಂದು ಸ್ವಿಗ್ಗಿ ಸ್ಪಷನೆ ನೀಡಿದೆ.