ತೆಹ್ರಿ, ಜು 10 (DaijiworldNews/HR): ತೆಹ್ರಿ ಜಿಲ್ಲೆಯ ಸುರ್ಕಂಡ ದೇವಿ ದೇವಾಲಯದ ರೋಪ್ ವೇಯಲ್ಲಿ ತಾಂತ್ರಿಕ ದೋಷದಿಂದಾಗಿ ಉತ್ತರಾಖಂಡದ ಬಿಜೆಪಿ ಶಾಸಕ ಸೇರಿದಂತೆ 60 ಮಂದಿ ಕೇಬಲ್ ಕಾರಿನಲ್ಲಿ ಗಾಳಿಯಲ್ಲಿ ಸಿಲುಕಿಕೊಂಡಿದ್ದು, ಅವರನ್ನು ರಕ್ಷಿಸಿರುವ ಘಟನೆ ನಡೆದಿದೆ.
ತಾಂತ್ರಿಕ ಕಾರಣಗಳಿಂದಾಗಿ ರೋಪ್ ವೇ ಇದ್ದಕ್ಕಿದ್ದಂತೆ ನಿಂತುಹೋಗಿದ್ದು, ಎಲ್ಲರನ್ನೂ ಸುರಕ್ಷಿತವಾಗಿ ಹೊರ ಕರೆತರಲಾಗಿದೆ.
ಇನ್ನು ತೆಹ್ರಿ ಗರ್ವಾಲ್ ಎಸ್ಎಸ್ಪಿ ನವನೀತ್ ಭುಲ್ಲರ್, ಟ್ರಾಲಿಯಲ್ಲಿ ತಾಂತ್ರಿಕ ದೋಷದಿಂದಾಗಿ ಸುರ್ಕಂಡ ದೇವಿ ದೇವಾಲಯದ ರೋಪ್ ವೇಯನ್ನ 20 ರಿಂದ 25 ನಿಮಿಷಗಳ ಕಾಲ ನಿಲ್ಲಿಸಲಾಯಿತು.