ಜಮ್ಶೆಡ್ಪುರ, ಜು 10 (DaijiworldNews/HR): ಉದ್ಯಮಿ ಕನ್ಹಯ್ಯ ಸಿಂಗ್ ಕೊಲೆಗೆ ಸಂಬಂಧಿಸಿದಂತೆ ಆತನ ಮಗಳು ಸೇರಿದಂತೆ ನಾಲ್ವರು ಆರೋಪಿಗಳನ್ನು ಜಾರ್ಖಂಡ್ ಪೊಲೀಸರು ಬಂಧಿಸಿರುವ ಘಟನೆ ನಡೆದಿದೆ.
ಬಂಧಿತ ಆರೋಪಿಗಳನ್ನು ಮೃತ ಕನ್ಹಯ್ಯ ಸಿಂಗ್ ಮಗಳು ಅಪರ್ಣಾ ಸಿಂಗ್ (19), ಆಕೆಯ ಬಾಯ್ಫ್ರೆಂಡ್ ರಾಜ್ವೀರ್ (21), ನಿಖಿಲ್ ಗುಪ್ತ ಮತ್ತು ಸೌರಭ್ ಕಿಸ್ಕು ಎಂದು ಗುರುತಿಸಲಾಗಿದೆ.
ಕನ್ಹಯ್ಯಾ ಸಿಂಗ್ ಅವರನ್ನು ಜೂನ್ 30ರಂದ ಜಾರ್ಖಂಡ್ನ ಆದಿತ್ಯಾಪುರದಲ್ಲಿ ಹತ್ಯೆ ಮಾಡಿದ್ದು, ರಾಜ್ವೀರ್ ಜೊತೆಗಿನ ಮಗಳ ಪ್ರೇಮ ಸಂಬಂಧವನ್ನು ಕನ್ಹಯ್ಯ ತೀವ್ರವಾಗಿ ವಿರೋಧಿಸಿದ್ದೇ ಕೊಲೆಗೆ ಕಾರಣ ಎಂದು ಹೇಳಲಾಗಿದೆ.
ಇನ್ನು ತಂದೆ ಉಡುಗೊರೆಯಾಗಿ ನೀಡಿದ್ದ ಡೈಮಂಡ್ ರಿಂಗ್ ಅನ್ನು ತನ್ನ ಬಾಯ್ಫ್ರೆಂಡ್ಗೆ ನೀಡಿ, ಕೊಲೆ ಮಾಡಲು ಶೂಟರ್ಗಳಿಗೆ ಮುಂಗಡ ಹಣದ ರೂಪದಲ್ಲಿ ಅಪರ್ಣಾ ನೀಡಿದ್ದಳು ಎಂದು ತಿಳಿದುಬಂದಿದೆ.