ಬೆಂಗಳೂರು, ಜು 10 (DaijiworldNews/HR): ಹಿಂದಿನಿಂದ ವೇಗವಾಗಿ ಬಂದ ಕಸದ ಲಾರಿ ಬೈಕ್ಗೆ ಡಿಕ್ಕಿ ಹೊಡೆದ ಪರಿಣಾಮ ಮಹಿಳೆಯೊಬ್ಬರು ಸಾವನ್ನಪ್ಪಿರುವ ಘಟನೆ ನಡೆದಿದೆ.
ಸಾವನ್ನಪ್ಪಿರುವ ಮಹಿಳೆಯನ್ನು ವಿಜಯ ಎಂದು ಗುರುತಿಸಲಾಗಿದೆ.
ತಮ್ಮ ಪತಿ ಯೋಗೇಂದ್ರ ಅವರ ಜೊತೆಗೆ ನಾಗರಭಾವಿ ರಿಂಗ್ ರಸ್ತೆಯಲ್ಲಿ ಹೋಗುತ್ತಿದ್ದಾಗ ಹಿಂದೆಯಿಂದ ವೇಗವಾಗಿ ಬಂದ ಬಿಬಿಎಂಪಿ ಕಸದ ಲಾರಿ ಬೈಕ್ಗೆ ಡಿಕ್ಕಿ ಹೊಡೆದಿದೆ.
ಇನ್ನು ಅಪಘಾತದಲ್ಲಿ ವಿಜಯ ಕಲಾ ಮೃತಪಟ್ಟಿದ್ದು, ಅವರ ಪತಿ ಯೋಗೇಂದ್ರ ಸ್ಥಿತಿ ಗಂಭೀರವಾಗಿದ್ದು ಅವರನ್ನು ಸ್ಥಳೀಯ ಆಸ್ಪತ್ರೆಗೆ ದಾಖಲಿಸಲಾಗಿದೆ.
ಈ ಬಗ್ಗೆ ಬ್ಯಾಟರಾಯನಪುರ ಸಂಚಾರಿ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದ್ದು, ಲಾರಿ ಚಾಲಕನನ್ನು ಬಂಧಿಸಲಾಗಿದೆ.