ಬೆಂಗಳೂರು, ಜು 10 (DaijiworldNews/HR): ಅಬಕಾರಿ ಸಚಿವ ಗೋಪಾಲಯ್ಯ ಅವರ ಪಿಎ ಎಂದು ಹಿರಿಯ ಐಎಎಸ್ ಅಧಿಕಾರಿ ಮುನೀಶ್ ಮೌದ್ಗಿಲ್ಗೆ ಬೆದರಿಕೆ ಹಾಕಿದ ಪ್ರಕರಣಕ್ಕೆ ಸಂಬಂಧಿಸಿದಂತೆ ಸಂಪಿಗೆಹಳ್ಳಿ ಪೊಲೀಸರು ಆರೋಪಿಯನ್ನು ಬಂಧಿಸಿದ್ದಾರೆ.
ಸಾಂದರ್ಭಿಕ ಚಿತ್ರ
ಬಂಧಿತ ಆರೋಪಿಯನ್ನು ಗಂಗಾಧರ್ ಎಂದು ಗುರುತಿಸಲಾಗಿದೆ.
ಸಚಿವ ಗೋಪಾಲಯ್ಯನವರ ಪರ್ಸನಲ್ ಸೆಕ್ರೆಟರಿ ಎಂದು ಕರೆ ಮಾಡಿ ಗಂಗಾಧರ್ ಹಿರಿಯ ಐಎಎಸ್ ಅಧಿಕಾರಿ ಮುನೀಶ್ ಮೌದ್ಗಿಲ್ಗೆ ಬೆದರಿಕೆ ಹಾಕಿದ್ದ.
ಇನ್ನು ಜುಲೈ 1 ರಂದು ರಾತ್ರಿ 11 ಗಂಟೆಗೆ ಮುನೀಶ್ ಮೌದ್ಗಿಲ್ಗೆ ಕರೆ ಮಾಡಿದ್ದ ವ್ಯಕ್ತಿ. ಕಾರು ಚಾಲಕ ಆನಂದ್ ವರ್ಗಾವಣೆ ಮಾಡಿದ್ದಕ್ಕೆ ಕರೆ ಮಾಡಿ ಬೆದರಿಕೆ ಹಾಕಿದ್ದ . ಈ ವೇಳೆ ತಾನೂ ಅಬಕಾರಿ ಸಚಿವ ಗೋಪಾಲಯ್ಯನವರ ಪರ್ಸನಲ್ ಸೆಕ್ರೆಟರಿ ಎಂದು ಹೇಳಿಕೊಂಡಿದ್ದಾನೆ.
ಈ ವಿಷಯವನ್ನು ಅಬಕಾರಿ ಸಚಿವರ ಪಿಎ ರಾಮೇಗೌಡ ಅವರಿಗೆ ತಿಳಿಸಿದ ಮುನೀಶ್ ಮೌದ್ಗಿಲ್ ಅವರಿಂದ ಮಾಹಿತಿಯನ್ನು ಪಡೆದಿದ್ದು, ರಾಮೇಗೌಡ ಈ ವೇಳೆ ಸಚಿವರ ಪಿಎ ಎಂದು ಯಾರೋ ಕರೆ ಮಾಡಿದ್ದಾರೆ ಆ ವ್ಯಕ್ತಿ ಗೊತ್ತಿಲ್ಲ ಎಂದು ತಿಳಿಸಿದ್ದು, ತಕ್ಷಣ ಸಂಪಿಗೆಹಳ್ಳಿ ಪೊಲೀಸ್ ಠಾಣೆಯಲ್ಲಿ ಮುನೀಶ್ ಮೌದ್ಗಿಲ್ ದೂರು ನೀಡಿ ಇದೀಗ ಗಂಗಾಧರ್ ನನ್ನು ಬಂಧಿಸಲಾಗಿದೆ.