ನವದೆಹಲಿ, ಜು 09 (DaijiworldNews/DB): ಅಡುಗೆ ಅನಿಲ ದರವನ್ನು ನಿರಂತರವಾಗಿ ಏರಿಸುತ್ತಿರುವ ಪ್ರಧಾನಿ ನರೇಂದ್ರ ಮೋದಿಯವರು ನಿಮಗೆ ತಾಕತ್ತಿದ್ದರೆ ನಮ್ಮ ಈ ನಿರ್ಧಾರವನ್ನು ತಹಬಂದಿಗೆ ತನ್ನಿ ಎಂಬುದಾಗಿ ದೇಶದ 133 ಕೋಟಿ ಭಾರತೀಯರಿಗೆ ಸವಾಲು ಹಾಕುತ್ತಿದ್ದಾರೆ ಎಂದು ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ವ್ಯಂಗ್ಯವಾಡಿದ್ದಾರೆ.
ಈ ಕುರಿತು ಟ್ವೀಟ್ ಮಾಡಿರುವ ಅವರು, ಅಡುಗೆ ಅನಿಲ, ಇಂಧನ ದರ ಏರಿಕೆಯಿಂದ ಜನ ಹೈರಾಣಾಗಿದ್ದಾರೆ. ಗಬ್ಬರ್ ಟ್ಯಾಕ್ಸ್ ಲೂಟ್ ಮತ್ತು ನಿರುದ್ಯೋಗದಿಂದ ಜನ ಬಸವಳಿದಿದ್ದಾರೆ. ಆದರೆ ಜನರ ಸಂಕಷ್ಟ ಅರಿಯಲು ಅವರು ಮುಂದಾಗುತ್ತಿಲ್ಲ. ಬದಲಾಗಿ ತಾಕತ್ತಿದ್ದರೆ ತಡೆಯಿರಿ ಎಂದು ಜನರಿಗೇ ಸವಾಲೆಸೆಯುತ್ತಿದ್ದಾರೆ ಎಂದಿದ್ದಾರೆ.
ಶೇ 157ರಷ್ಟುಎಲ್ಪಿಜಿ ಸಿಲಿಂಡರ್ ದರ ಏರಿಕೆ ಮಾಡಿರುವುದೇ ಬಿಜೆಪಿ ಸಾಧನೆ. ಆ ಮೂಲಕ ಇತರೆಲ್ಲಾ ದಾಖಲೆಗಳನ್ನು ಮುರಿದಿದ್ದಾರೆ ಎಂದವರು ಇದೇ ವೇಳೆ ಟೀಕಿಸಿದ್ದಾರೆ.