ಕುಣಿಗಲ್, ಜು 09 (DaijiworldNews/HR): ಕುಣಿಗಲ್ ತಾಲೂಕಿನ ರಾಷ್ಟ್ರೀಯ ಹೆದ್ದಾರಿ 75 ರ ಬಿ.ಎಂ ರಸ್ತೆ ನಾಗೇಗೌನಪಾಳ್ಯ ಗೇಟ್ ಬಳಿ ಚಾಲಕನ ನಿಯಂತ್ರಣ ತಪ್ಪಿ, ಕಾರು ಪಲ್ಟಿಯಾದ ಪರಿಣಾಮ ಎರಡುವರೆ ತಿಂಗಳ ಮಗು ಮೃತಪಟ್ಟು ಮಗುವಿನ ತಂದೆ, ತಾಯಿ ಗಾಯಗೊಂಡಿರುವ ಘಟನೆ ನಡೆದಿದೆ.
ಎರಡುವರೆ ತಿಂಗಳ ಸಮರ್ಥ ಮಗು ಸ್ಥಳದಲ್ಲೇ ಮೃತಪಟ್ಟಿದ್ದು, ಮಗುವಿನ ತಾಯಿ ರಮ್ಯ ಹಾಗೂ ತಂದೆ ಪರಮೇಶ್ ಗಾಯಗೊಂಡಿದ್ದಾರೆ.
ಇನ್ನು ಪರಮೇಶ್ ತನ್ನ ಹೆಂಡತಿ ರಮ್ಯ ಹಾಗೂ ಮಗು ಸಮರ್ಥನೊಂದಿಗೆ ತನ್ನ ಗ್ರಾಮದಿಂದ ಕಾರಿನಲ್ಲಿ ಕುಣಿಗಲ್ ತಾಲೂಕಿನ ಎಡಿಯೂರಿಗೆ ಹೋಗಿ ಸಿದ್ದಲಿಂಗಸ್ವಾಮಿ ಸ್ವಾಮಿಗೆ ಪೂಜೆ ಸಲ್ಲಿಸಿ ತನ್ನ ಗ್ರಾಮಕ್ಕೆ ಹಿಂತಿರುಗುತ್ತಿರಬೇಕಾದರೆ ಈ ಅವಘಡ ಸಂಭವಿಸಿದೆ ಎನ್ನಲಾಗಿದೆ.
ಅಮೃತೂರು ಪೊಲೀಸರು ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಗೊಂಡಿದ್ದಾರೆ.