ಮುಂಬೈ, ಜು 09 (DaijiworldNews/HR): ಮುಂಬೈಯಲ್ಲಿ ಕಳ್ಳನೊಬ್ಬ ಕಟ್ಟಡವೊಂದರ ನಾಲ್ಕನೇ ಮಹಡಿಯಿಂದ ಜಿಗಿಯುತ್ತೇನೆ ಎಂದು ಬಂಧನ ತಪ್ಪಿಸಿಕೊಳ್ಳಲು ಹುಟ್ಟಾಟ ಮಾಡಿ ಸಾವನ್ನಪ್ಪಿರುವ ಘಟನೆ ನಡೆದಿದೆ.
ಆರೋಪಿ ರೋಹಿತ್ನ ಸುರಕ್ಷತೆಗಾಗಿ ಕೆಲ ಗಂಟೆಗಳ ಕಾಲ, ನಿವಾಸಿಗಳು, ಪೊಲೀಸ್ ಅಧಿಕಾರಿಗಳು ಮತ್ತು ಅಗ್ನಿಶಾಮಕ ದಳದ ಅಧಿಕಾರಿಗಳು ಕಟ್ಟಡವೊಂದರ ನಾಲ್ಕನೇ ಮಹಡಿಯಿಂದ ಕಿಟಕಿಯ ಬಳಿ ಬರುವಂತೆ ಮನವೊಲಿಸಲು ಪ್ರಯತ್ನಿಸಿದ್ದಾರೆ. ಆದರೆ ಮನವೋಲಿಕೆಗೆ ಬಗ್ಗದ ಆರೋಪಿ ಬಂಧನ ಭೀತಿಯಲ್ಲಿ ಕಡ್ಡಡದಿಂದ ಜಿಗಿದಿದ್ದಾನೆ.
ಇನ್ನು ಆತನನ್ನು ತಕ್ಷಣ ಅವರನ್ನು ಜೆಜೆ ಆಸ್ಪತ್ರೆಗೆ ಕರೆದೊಯ್ಯಲಾಯಿತು, ಅಲ್ಲಿ ಸಾವನ್ನಪ್ಪಿದ್ದಾನೆ ಎಂಬ ಮಾಹಿತಿ ಲಭ್ಯವಾಗಿದೆ.