ಶ್ರೀನಗರ, ಜು 09 (DaijiworldNews/HR): ಹಿಂದೂಗಳ ಪವಿತ್ರ ಯಾತ್ರಾ ಸ್ಥಳವಾಗಿರುವ ಜಮ್ಮು-ಕಾಶ್ಮೀರದ ಅಮರನಾಥ ಮಂದಿರ ಇರುವ ಗುಹೆ ಬಳಿ ಮೇಘ ಸ್ಫೋಟ ಸಂಭವಿಸಿ ಮೃತಪಟ್ಟ ಯಾತ್ರಿಕರ ಸಂಖ್ಯೆ 16ಕ್ಕೇರಿದೆ.
ಈ ಕುರಿತು ಗಡಿ ಭದ್ರತಾ ಪಡೆಯ ವಕ್ತಾರ ಮಾಹಿತಿ ನೀಡಿದ್ದು, 16 ಮೃತದೇಹಗಳನ್ನು ಬಲ್ತಲ್ಗೆ ರವಾನಿಸಲಾಗಿದ್ದು, ತನ್ನ ಮಾರ್ಗವನ್ನು ಐಟಿಬಿಪಿ ವಿಸ್ತರಿಸಿದ್ದು ಪಂಜತರ್ನಿಯವರೆಗೆ ಪವಿತ್ರ ಗುಹೆಯ ಕೆಳಭಾಗದಿಂದ ಕಳುಹಿಸಲಾಗಿದೆ ಎಂದರು.
ಇನ್ನು ಜೂನ್ 30ರಂದು ಆರಂಭವಾಗಿದ್ದ ಪವಿತ್ರ ಅಮರನಾಥ ಯಾತ್ರೆ ನಂತರ ದುರಂತ ನಂತರ ಸ್ಥಗಿತಗೊಂಡಿದ್ದು, ಪರಿಹಾರ ರಕ್ಷಣಾ ಕಾರ್ಯ ಮುಗಿದ ನಂತರ ಯಾತ್ರೆ ಪುನರಾರಂಭದ ಕುರಿತು ನಿರ್ಧಾರ ತೆಗೆದುಕೊಳ್ಳಲಾಗುವುದು ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಈಗಗಲೇ 16 ಮಂದಿ ಯಾತ್ರಿಕರು ಮೃತಪಟ್ಟಿದ್ದು, 40 ಮಂದಿ ಕಾಣೆಯಾಗಿದ್ದು, ರಕ್ಷಣಾ ಕಾರ್ಯ ನಿರಾತಂಕವಾಗಿ ಸಾಗುತ್ತಿದೆ.