ನವದೆಹಲಿ, ಜು 09 (DaijiworldNews/MS): ಹಾಸ್ಯಮಯ ಜಾಹೀರಾತು ಮೂಲಕ ಕಾಣಿಸಿಕೊಳ್ಳುವ ಫೆವಿಕಾಲ್ ಬ್ರ್ಯಾಂಡ್ ಈ ಬಾರಿ , ಬ್ರಿಟನ್ ನ ರಾಜಕೀಯ ಪ್ರಹಸನ ಹಾಗೂ ಪ್ರಧಾನಿ ಬೋರಿಸ್ ಪದತ್ಯಾಗ ಬಗ್ಗೆ ಸೃಜನಶೀಲತೆಯ ಪದಪ್ರಯೋಗ ಮಾಡಿ ಟ್ವೀಟ್ ಮಾಡಿದ್ದು ಇದು ನೆಟ್ಟಿಗರ ಗಮನ ಸೆಳೆಯುತ್ತಿದೆ.
ರಾಜಮನೆತನದಿಂದ ಪ್ರಿನ್ಸ್ ಹ್ಯಾರಿ ಮತ್ತು ಮೇಘನ್ ಮಾರ್ಕೆಲ್ ಅವರ ಪ್ರತ್ಯೇಕತೆಗೊಂಡಿದ್ದಾಗ ಟ್ವೀಟ್ ಮಾಡಿದ್ದ ಬ್ರ್ಯಾಂಡ್ , "ಫೆವಿಕೋಲ್ ಹೋತಾ ತೋ ಸಸ್-ಎಕ್ಸ್ ನಾ ಹೋತಾ ಔರ್ ಪರಿವಾರ ಅಟೂತ್ ರೆಹ್ತಾ" ಎಂದು ಹೇಳಿತ್ತು . ಇದನ್ನೇ ಮರು ಟ್ವೀಟ್ ಮಾಡಿ , "(ಬೋರ್)ಇಸ್ ಬಾರ್ ಹಮ್ ಫಿರ್ಸೆ ಕಹೆಂಗೆ... (ನಾವು ಇದನ್ನು ಮತ್ತೊಮ್ಮೆ ಹೇಳುತ್ತೇವೆ)" ಎಂದು ಹೇಳಿದ್ದು, ಫೇವಿಕಾಲ್ ಇರುತ್ತಿದ್ದರೆ ಕುಟುಂಬವು ಮುರಿದುಹೋಗುತ್ತಿರಲಿಲ್ಲ ಎಂದು ವಿನೋದವಾಗಿ ಹೇಳಿದೆ.
"ಆತ್ಮೀಯ ರಾಜಮನೆತನದವರೇ, ಕೊಹಿನೂರ್ ನಹಿ, ಫೆವಿಕಾಲ್ ಲೆ ಜಾನಾ ಚಾಹಿಯೇ ಥಾ ( ಕೊಹಿನೂರ್ ಅಲ್ಲ, ನೀವು ಫೆವಿಕಾಲ್ ತೆಗೆದುಕೊಂಡು ಹೋಗಬೇಕಿತ್ತು)" ಎಂಬ ಸಂದೇಶದೊಂದಿಗೆ ಪೋಸ್ಟ್ ನಲ್ಲಿ ಬ್ರಿಟಿಷ್ ರಾಜಪ್ರಭುತ್ವದ ರಾಜ ಕಿರೀಟವನ್ನು ಚಿತ್ರ ಹಂಚಿಕೊಂಡಿದೆ