ನವದೆಹಲಿ, ಜು 08 (DaijiworldNews/SM): ಭಾರತದಲ್ಲಿ ಮುಂದಿನ ಐದು ವರ್ಷದಲ್ಲಿ ಪೆಟ್ರೋಲ್ ಬಳಕೆ ಇರುವುದಿಲ್ಲ ಎಂದು ಕೇಂದ್ರ ರಸ್ತೆ ಸಾರಿಗೆ ಮತ್ತು ಹೆದ್ದಾರಿ ಸಚಿವ ನಿತಿನ್ ಗಡ್ಕರಿ ಹೇಳಿರುವುದು ವರದಿಯಾಗಿದೆ.
ಮಹಾರಾಷ್ಟ್ರದ ಅಕೋಲದಲ್ಲಿರುವ ಡಾ. ಪಾಂಜಾಬರಾವ್ ದೇಶಮುಖ್ ಕೃಷಿ ವಿದ್ಯಾಪೀಠದಲ್ಲಿ ಗುರುವಾರ ನಡೆದ 36ನೇ ಘಟಿಕೋತ್ಸವ ಕಾರ್ಯಕ್ರಮದಲ್ಲಿ ನಿತಿನ್ ಗಡ್ಕರಿ ಈ ವಿಚಾರ ಮಾತನಾಡಿರುವುದು ತಿಳಿದುಬಂದಿದೆ. ಎಂಟು ಆಸನಗಳ ವಾಹನಗಳಲ್ಲಿ ಆರು ಏರ್ ಬ್ಯಾಗ್ ಕಡ್ಡಾಯ: ಕೇಂದ್ರ ಸಚಿವ ಗಡ್ಕರಿ ಈ ಘಟಿಕೋತ್ಸವದಲ್ಲಿ ನಿತಿನ್ ಗಡ್ಕರಿ ಅವರಿಗೆ ಡಾಕ್ಟರ್ ಆಫ್ ಸೈನ್ಸ್ (ಡಿಎಸ್ಸಿ) ಗೌರವ ಪದವಿ ನೀಡಲಾಯಿತು. ಮಹಾರಾಷ್ಟ್ರ ರಾಜ್ಯಪಾಲ ಭಗತ್ ಸಿಂಗ್ ಕೋಶ್ಯಾರಿ ಪದವಿ ಪ್ರಮಾಣಪತ್ರವನ್ನು ಗಡ್ಕರಿಗೆ ನೀಡಿದರು.
ವಿಶ್ವವಿದ್ಯಾಲಯದ ಮಾಜಿ ವೈಸ್ ಚಾನ್ಸಲರ್ ಡಾ. ಮೋತಿಲಾಲ್ ಮದನ್, ಹಾಲಿ ಉಪಕುಲಪತಿ ವಿಲಾಸ್ ಭಾಲೆ, ವಿವಿಯ ರಿಜಿಸ್ಟ್ರಾರ್, ಬೋಧಕ ವರ್ಗದ ಡೀನ್ಗಳು, ಪ್ರೊಫೆಸರ್ಗಳು, ವಿದ್ಯಾರ್ಥಿಗಳು ಮೊದಲಾದವರು ಈ ಕಾರ್ಯಕ್ರಮದಲ್ಲಿ ಪಾಲ್ಗೊಂಡಿದ್ದರು.