ಬಿಹಾರ,ಜು 08 (DaijiworldNews/MS): ಶಾಲಾ ಸಮವಸ್ತ್ರಕ್ಕೆ ಹಣ ನೀಡುವಂತೆ ಬೆದರಿಸಿ ಮಚ್ಚಿ ಹಿಡಿದು ಶಾಲೆಗೆ ನುಗ್ಗಿದ ವ್ಯಕ್ತಿಯೊಬ್ಬ ಶಿಕ್ಷಕರಿಗೆ ಬೆದರಿಕೆ ಹಾಕಿದ ಘಟನೆ ಬಿಹಾರದ ಅರಾರಿಯಾದಲ್ಲಿ ನಡೆದಿದೆ.
ಈ ಬಗ್ಗೆ ಮಾತನಾಡಿರುವ ಜೋಕಿಹತ್ ಸ್ಟೇಷನ್ ಹೌಸ್ ಆಫೀಸರ್ , "ತಂದೆಯೋರ್ವ ಮಚ್ಚು ಹಿಡಿದು ತನ್ನ ಮಗುವಿನ ಶಾಲೆಗೆ ಬಂದು ಶಾಲಾ ಸಮವಸ್ತ್ರಕ್ಕಾಗಿ ಹಣ ನೀಡಲಿಲ್ಲ ಎಂಬ ಕಾರಣಕ್ಕೆ ಶಿಕ್ಷಕರಿಗೆ ಬೆದರಿಕೆ ಹಾಕಿದ್ದಾನೆ" ಎಂದು ಹೇಳಿದ್ದಾರೆ.
ಬೆದರಿಕೆ ಹಾಕಿದ ಆರೋಪಿಯನ್ನು ಅಕ್ಬರ್ ಎಂದು ಗುರುತಿಸಲಾಗಿದ್ದು, 24 ಗಂಟೆಯೊಳಗೆ ಹಣ ನೀಡದಿದ್ದರೆ ಮತ್ತೆ ಬರುತ್ತೇನೆ ಎಂದು ಶಿಕ್ಷಕರಿಗೆ ಬೆದರಿಕೆ ಹಾಕುದ್ದಾನೆ.
ಭಗವಾನ್ಪುರ ಪಂಚಾಯಿತಿ ವ್ಯಾಪ್ತಿಯ ಜೋಕಿಹಾಟ್ ಬ್ಲಾಕ್ನಲ್ಲಿ ಈ ಘಟನೆ ನಡೆದಿದೆ.ಘಟನೆ ನಡೆದ ಬೆನ್ನಲ್ಲೇ ವ್ಯಕ್ತಿಯ ವಿರುದ್ಧ ಎಫ್ಐಆರ್ ದಾಖಲಿಸಲಾಗಿದೆ.
ಈ ಬಗ್ಗೆ ಶಾಲೆಯ ಮುಖ್ಯೋಪಾಧ್ಯಾಯ ಜಹಾಂಗೀರ್ ಜೋಕಿಹತ್ ಪಿಡಿಒಗೆ ದೂರು ನೀಡಿದ್ದಾರೆ.ಶಾಲೆಯಲ್ಲಿ ತರಗತಿಗಳು ನಡೆಯುತ್ತಿದ್ದಾಗಲೇ ಈ ಘಟನೆ ನಡೆದಿದೆ. ಕತ್ತಿ ಹಿಡಿದ ವ್ಯಕ್ತಿಯ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.