ಬೆಳಗಾವಿ , ಜು 08 (DaijiworldNews/HR): ಬೆಳಗಾವಿ ಜಿಲ್ಲೆಯ ಅಥಣಿ ತಾಲೂಕಿನ ರಡ್ಡೆರಟ್ಟಿ ಗ್ರಾಮದ ಕಾಲುವೆಯಲ್ಲಿ ತುಂಬಿದ್ದ ನೀರಿನಲ್ಲಿ ಕಾರು ಕೊಚ್ಚಿ ಹೋಗಿ, ಅದರಲ್ಲಿದ್ದ ಇಬ್ಬರು ಸಾವನ್ನಪ್ಪಿ, ಓರ್ವ ಪಾರಾಗಿರುವ ಘಟನೆ ನಡೆದಿದೆ.
ಸಾಂದರ್ಭಿಕ ಚಿತ್ರ
ಕಾರಿನಲ್ಲಿದ್ದ ಮಹಾದೇವ ಚಿಗರಿ (26), ಸುರೇಶ್ ಬಡಚಿ(27) ಮೃತಪಟ್ಟಿದ್ದು, ಶ್ರೀ ಕಾಂತ್ ನಡುವಿನ ಮನಿ ಅಪಾಯದಿಂದ ಪಾರಾಗಿದ್ದಾರೆ.
ಇನ್ನು ಘಟನಾ ಸ್ಥಳಕ್ಕೆ ಪೊಲೀಸರು ಭೇಟಿ, ನೀಡಿ ಪರಿಶೀಲನೆ ನಡೆಸಿದ್ದಾರೆ.
ಕಾಲುವೆಯಲ್ಲಿ ಸಿಲುಕಿದ್ದ ಕಾರನ್ನು ಕ್ರೈನ್ ಮೂಲಕ ಸಿಬ್ಬಂದಿಗಳು ಹೊರ ತೆಗೆದಿದ್ದಾರೆ ಎಂದು ತಿಳಿದು ಬಂದಿದೆ.