ಹುಬ್ಬಳ್ಳಿ,ಜು 08 (DaijiworldNews/HR): ಹುಬ್ಬಳ್ಳಿಯ ಕಲಘಟಗಿ ತಾಲೂಕು ಜೋಡಳ್ಳಿ ಬಳಿ 30ಕ್ಕೂ ಹೆಚ್ಚು ಜನರು ಪ್ರಯಾಣಿಸುತ್ತಿದ್ದ ಬಸ್ ಏಕಾಏಕಿ ಪಲ್ಟಿಯಾಗಿ ಬಿದ್ದ ಘಟನೆ ನಡೆದಿದೆ.
ಕಲಘಟಗಿಯಿಂದ ಧಾರವಾಡಕ್ಕೆ ತೆರಳುತ್ತಿದ್ದ ಬಸ್ ಜೋಡಳ್ಳಿ ಬಳಿ ಸ್ಟೇರಿಂಗ್ ರಾಡ್ ಕಟ್ ಆಗಿ ಕೆರೆಯ ಪಕ್ಕದ ದಂಡೆಯ ಮೇಲೆ ಪಲ್ಟಿಯಾಗಿದ್ದು, ಬಸ್ ನಲ್ಲಿದ್ದ ಪ್ರಯಾಣಿಕರು ಹೊರಬರಲಾಗದೇ ಹರಸಾಹಸಪಟ್ಟಿದ್ದಾರೆ.
ಇನ್ನು ಸ್ಥಳಕ್ಕೆ ಪೊಲೀಸರು ದೌಡಾಯಿಸಿದ್ದು, ರಕ್ಷಣಾ ಕಾರ್ಯಾಚರಣೆ ನಡೆಸಿದ್ದಾರೆ.