ಚೆನ್ನೈ, ಜು 08 (DaijiworldNews/DB): ಖ್ಯಾತ ತಮಿಳು ನಟ ಚಿಯಾನ್ ವಿಕ್ರಮ್ ಅವರಿಗೆ ಇಂದು ಹೃದಯಾಘಾತ ಸಂಭವಿಸಿದ್ದು, ಚೆನ್ನೈನ ಕಾವೇರಿ ಆಸ್ಪತ್ರೆಗೆ ದಾಖಲಾಗಿದ್ದಾರೆ.
ಇಂದು ಸಂಜೆ 6 ಗಂಟೆಗೆ ಚೆನ್ನೈನಲ್ಲಿ ನಡೆಯಲಿದ್ದ ಚಿಯಾನ್ ವಿಕ್ರಮ್ ಅಭಿನಯದ ’ಪೊನ್ನಿಯಿನ್ ಸೆಲ್ವನ್ʼ ಚಿತ್ರದ ಟೀಸರ್ ಬಿಡುಗಡೆ ಸಮಾರಂಭದಲ್ಲಿ ಚಿಯಾನ್ ವಿಕ್ರಮ್ ಭಾಗವಹಿಸಬೇಕಾಗಿತ್ತು, ಆದರೆ ಇದೀಗ ಅವರಿಗೆ ಹೃದಯಾಘಾತವಾಗಿರುವ ಸುದ್ದಿ ಬಂದಿದೆ. ಇದರಿಂದಾಗಿ ಅಭಿಮಾನಿಗಳು, ಹಿತೈಷಿಗಳಿಗೆ ಆತಂಕ ಉಂಟಾಗಿದೆ. ಚಿತ್ರರಂಗದ ಗಣ್ಯರು ಆಸ್ಪತ್ರೆಗೆ ದೌಡಾಯಿಸಿದ್ದಾರೆ. ಅವರ ಆರೋಗ್ಯದ ಕುರಿತು ಆಸ್ಪತ್ರೆ ಕಡೆಯಿಂದ ಇನ್ನಷ್ಟೆ ಮಾಹಿತಿ ಲಭಿಸಬೇಕಿದೆ.
ತೆಲುಗು, ಮಲಯಾಳಂ ಮತ್ತು ಹಿಂದಿ ಚಿತ್ರಗಳಲ್ಲಿ ನಟಿಸಿರುವ ಚಿಯಾನ್ ವಿಕ್ರಮ್ ಅವರು, ರಾಷ್ಟ್ರಪ್ರಶಸ್ತಿ, ಏಳು ಫಿಲ್ಮ್ಫೇರ್ ಪ್ರಶಸ್ತಿಗಳು, ತಮಿಳುನಾಡು ರಾಜ್ಯ ಚಲನಚಿತ್ರ ಪ್ರಶಸ್ತಿ, ತಮಿಳುನಾಡು ಸರ್ಕಾರದ ಕಲೈಮಾಮಣಿ ಪ್ರಶಸ್ತಿಗಳನ್ನು ಮುಡಿಗೇರಿಸಿಕೊಂಡಿದ್ದಾರೆ.