ಬೆಂಗಳೂರು, ಜು 08 (DaijiworldNews/MS): ಕಾಂಗ್ರೆಸ್ ಭ್ರಷ್ಟಾಚಾರದ ಗಂಗೋತ್ರಿ. 10-ಜನಪಥ್ ಇದು ಕಾಂಗ್ರೆಸ್ ಭ್ರಷ್ಟರ, ಲೂಟಿಕೋರರ, ತೆರಿಗೆ ವಂಚಕರ, ಹಗರಣ ಸೃಷ್ಟಿಕರ್ತರ ರಕ್ಷಣಾ ತಾಣ ಎಂದು ಬಿಜೆಪಿ ವಾಗ್ದಾಳಿ ನಡೆಸಿದೆ.
ಈ ಸಂಬಂಧ ಟ್ವೀಟ್ ಮಾಡಿರುವ ಬಿಜೆಪಿ, ಭ್ರಷ್ಟಾಚಾರದ ಕಪ್ಪು ಹಣ ಕೊನೆಗೆ ಸೇರುವುದು ಇದೇ ಸ್ಥಳಕ್ಕೆ ಅಲ್ಲವೇ ಎಂದು ಪ್ರಶ್ನಿಸಿದೆ
ಡಿಕೆಶಿ ಅವರೇ ನಿಮ್ಮ ಪಕ್ಷದ ಉಪ್ಪಿನ ಅಂಗಡಿ ಹೆಡ್ ಕ್ವಾಟ್ರರ್ಸ್ ಇದೇ ತಾನೇ? ಅಲಿಬಾಬಾಮತ್ತು ಕಾಂಗ್ರೆಸ್ ಕಳ್ಳರು ಎಂದು ಲೇವಡಿ ಮಾಡಿದೆ.
ಕಾಂಗ್ರೆಸ್ ಭ್ರಷ್ಟಾಚಾರದ ಗಂಗೋತ್ರಿ. ದೇಶದಲ್ಲಿ ಅತಿ ಭಯಂಕರ ಭ್ರಷ್ಟಾಚಾರದ ಕೂಪ ಸೃಷ್ಟಿಸಿದ್ದೇ ಕಾಂಗ್ರೆಸ್. ನಕಲಿ ಗಾಂಧಿ ಕುಟುಂಬವೇ ಈ ಗಂಗೋತ್ರಿಯ ಪ್ರಧಾನ ಪಾಲುದಾರರು. ಹಾಗಾದರೆ, ಅಲಿಬಾಬಾಮತ್ತು ಕಾಂಗ್ರೆಸ್ ಕಳ್ಳರು ಗುಂಪಿನಲ್ಲಿರುವವರು ಯಾರು? ಎಂದು ಪ್ರಶ್ನಿಸಿದೆ.
ಆಗಸ್ಟಾ ವೆಸ್ಟ್ ಲ್ಯಾಂಡ್, 2ಜಿ ಸ್ಪೆಕ್ಟ್ರಮ್ ಹಂಚಿಕೆ, ನ್ಯಾಷನಲ್ ಹೆರಾಲ್ಡ್, ವಾದ್ರಾ-ಡಿಎಲ್ಎಫ್ ,ನೆಹರೂ ಕಾಲದ ಮುಂಡ್ರಾ ಹಗರಣ, ಇಂದಿರಾ ಕಾಲದ ಮಾರುತಿ ಹಗರಣಗಳ ಮೂಲಕ "ನಾವು ಭ್ರಷ್ಟಾಚಾರ ಮಾಡಲೆಂದೇ ಅಧಿಕಾರದಲ್ಲಿದ್ದೇವೆ" ಎಂಬುದನ್ನು ಕಾಂಗ್ರೆಸ್ ಸೂಚ್ಯವಾಗಿ ತಿಳಿಸಿತ್ತು! ಎಂದು ಬಿಜೆಪಿ ಕಾಂಗ್ರೆಸ್ ನಾಯಕರ ವಿರುದ್ಧ ಹರಿ ಹಾಯ್ದಿದೆ.