ನವದೆಹಲಿ, ಜು 08 (DaijiworldNews/HR): ಆರ್ಜೆಡಿಯ ಅಧ್ಯಕ್ಷ ಲಾಲು ಪ್ರಸಾದ್ ಯಾದವ್ ಆರೋಗ್ಯದಲ್ಲಿ ಚೇತರಿಸಿಕೆ ಕಂಡು ಬರುತ್ತಿದೆ ಎಂದು ಅವರ ಪುತ್ರಿ ಮಿಸಾ ಭಾರತಿ ಮಾಹಿತಿ ನೀಡಿದ್ದಾರೆ.
ಈ ಕುರಿತು ಮಿಸಾ ಭಾರತಿಯವರು ಆಸ್ಪತ್ರೆಯಲ್ಲಿ ಲಾಲು ಅವರು ಚೇತರಿಸಿಕೊಳ್ಳುತ್ತಿರುವ ಫೋಟೋಗಳನ್ನು ಟ್ವೀಟ್ನಲ್ಲಿ ಹಂಚಿಕೊಂಡಿದ್ದು, ತನ್ನ ತಂದೆಯ ಆರೋಗ್ಯ ಸ್ಥಿತಿ ಉತ್ತಮವಾಗಿದೆ. ಅವರು ಈಗ ಯಾರೊಬ್ಬರ ಬೆಂಬಲದೊಂದಿಗೆ ಕುಳಿತುಕೊಳ್ಳುವಷ್ಟು ಸಾಮರ್ಥ್ಯ ಹೊಂದಿದ್ದಾರೆ. ಶೀಘ್ರವಾಗಿ ಚೇತರಿಸಿಕೊಳ್ಳಲು ಎಲ್ಲರೂ ಪ್ರಾರ್ಥಿಸಿ ಎಂದು ಬರೆದಿದ್ದಾರೆ.
ಇನ್ನು ಜುಲೈ 7 ರಂದು ರಾತ್ರಿ ಪಾಟ್ನಾ ಆಸ್ಪತ್ರೆಯಿಂದ ಏರ್ಲಿಫ್ಟ್ ಮೂಲಕ ಲಾಲು ಅವರನ್ನು ದೆಹಲಿಯ ಆಲ್ ಇಂಡಿಯಾ ಇನ್ಸ್ಟಿಟ್ಯೂಟ್ ಆಫ್ ಮೆಡಿಕಲ್ ಸೈನ್ಸಸ್ ಗೆ ದಾಖಲಾಗಿತ್ತು.
ಲಾಲು ಅವರು ನಿವಾಸದಲ್ಲಿ ಬಿದ್ದು ಬಲ ಭುಜದ ಮೂಳೆ ಮುರಿತಕ್ಕೆ ಒಳಗಾಗಿದ್ದು, ಕಿಡ್ನಿ ಮತ್ತು ಶ್ವಾಸಕೋಶದ ಸೋಂಕು ಹಾಗೂ ರಕ್ತದೊತ್ತಡ ಸಮಸ್ಯೆಯಿಂದ ಲಾಲು ಬಹಳ ದಿನಗಳಿಂದ ಬಳಲುತ್ತಿದ್ದಾರೆ.