ನವದೆಹಲಿ, ಜು 08 (DaijiworldNews/MS): ಕೇಂದ್ರ ಸರ್ಕಾರದ ಪ್ರತಿಷ್ಟಿತ ಬುಲೆಟ್ ರೈಲು ಯೋಜನೆಯ ಮುಖ್ಯಸ್ಥ, ಎನ್ಎಚ್ಎಸ್ಆರ್ ಸಿಎಲ್ ವ್ಯವಸ್ಥಾಪಕ ನಿರ್ದೇಶಕ ಸತೀಶ್ ಅಗ್ನಿಹೋತ್ರಿಯನ್ನು ಗುರುವಾರ ವಜಾಗೊಳಿಸಿದೆ.
ನ್ಯಾಷನಲ್ ಹೈಸ್ಪೀಡ್ ರೈಲ್ ಕಾರ್ಪೊರೇಷನ್ ಲಿಮಿಟೆಡ್ (ಎನ್ಎಚ್ಎಸ್ಆರ್ಸಿಎಲ್) ಹೊರಡಿಸಿದ ಆದೇಶದ ಪ್ರಕಾರ, ಅಧ್ಯಕ್ಷ ಮತ್ತು ವ್ಯವಸ್ಥಾಪಕ ನಿರ್ದೇಶಕ (ಸಿಎಂಡಿ) ಸತೀಶ್ ಅಗ್ನಿಹೋತ್ರಿಯನ್ನು ಸೇವೆಗಳನ್ನು ತಕ್ಷಣದಿಂದ ಜಾರಿಗೆ ಬರುವಂತೆ ವಜಾಗೊಳಿಸಲಾಗಿದ್ದು, ಇಅವರ ಅಧಿಕರವನ್ನು (ಎನ್ಎಚ್ಎಸ್ಆರ್ಸಿಎಲ್) ಯೋಜನೆಯ ನಿರ್ದೇಶಕ ರಾಜೇಂದ್ರ ಪ್ರಸಾದ್ ಅವರಿಗೆ ಮೂರು ತಿಂಗಳ ಕಾಲ ಹಸ್ತಾಂತರಿಸಲಾಗಿದೆ.
ಅಧಿಕಾರಿಗಳ ಪ್ರಕಾರ, ಅಗ್ನಿಹೋತ್ರಿ ವಿರುದ್ಧ ಹಲವಾರು ಆರೋಪಗಳಿವೆ ಸತೀಶ್ ಅಗ್ನಿಹೋತ್ರಿ ರೈಲ್ವೆ ಸಚಿವಾಲಯದ ಅಡಿಯಲ್ಲಿ 'ಎ' ಕೇಂದ್ರ ಸಾರ್ವಜನಿಕ ವಲಯದ ಉದ್ಯಮ (ಸಿಪಿಎಸ್ಇ) ರೈಲ್ ವಿಕಾಸ್ ನಿಗಮ್ ಲಿಮಿಟೆಡ್ನಲ್ಲಿದ್ದಾಗ 2011 ರಿಂದಲೇ ಭ್ರಷ್ಟಾಚಾರ ಪ್ರಕರಣವನ್ನು ಎದುರಿಸುತ್ತಿದ್ದಾರೆ. ಅಧಿಕೃತ ಹುದ್ದೆಯ ದುರುಪಯೋಗ ಮತ್ತು ಅನಧಿಕೃತ ರೀತಿಯಲ್ಲಿ ಹಣವನ್ನು ಖಾಸಗಿ ಕಂಪನಿಗೆ ವರ್ಗಾಯಿಸಿರುವ ಆರೋಪವೂ ಇವರ ಮೇಲಿದೆ.