ಕುಣಿಗಲ್, ಜು 08 (DaijiworldNews/DB): ಕೌಟುಂಬಿಕ ಕಲಹದಿಂದ ನೊಂದು ಯುವಕನೊಬ್ಬ ಬ್ಲೇಡ್ನಿಂದ ಕತ್ತು, ಕೈ ಕೊಯ್ದುಕೊಂಡ ಘಟನೆ ಕುಣಿಗಲ್ ಪೊಲೀಸ್ ಠಾಣೆ ಮುಂಭಾಗ ಶುಕ್ರವಾರ ನಡೆದಿದೆ.
ತಾಲೂಕಿನ ಕಸಬಾ ಹೋಬಳಿ ಬಿಳಿದೇವಾಲಯ ಗ್ರಾಮದ ನಿವಾಸಿ ಅಬ್ರಾಜ್ ಎಂಬಾತ ಬ್ಲೇಡ್ನಿಂದ ಕತ್ತು, ಕೈ ಕೊಯ್ದುಕೊಂಡಾತ. ಈತನ ಪತ್ನಿ ಕೌಟುಂಬಿಕ ಕಲಹದ ಹಿನ್ನೆಲೆಯಲ್ಲಿ ದೂರು ನೀಡಲೆಂದು ಪೊಲೀಸ್ ಠಾಣೆಗೆ ಆಗಮಿಸಿದ್ದರು. ಈ ವೇಳೆ ಪತಿ ಅಬ್ರಾಜ್ ಕೂಡಾ ಬಂದಿದ್ದು, ಶರ್ಟ್ ಬಿಚ್ಚಿ ಕತ್ತು, ಕೈಯನ್ನು ಬ್ಲೇಡ್ನಿಂದ ಕೊಯ್ದುಕೊಂಡಿದ್ದಾನೆ.
ಆತ ತನ್ನ ಕತ್ತು, ಕೈಯನ್ನು ಕೊಯ್ದುಕೊಳ್ಳುವುದನ್ನು ಸಾರ್ವಜನಿಕರು ನೋಡಿದ್ದರಾದರೂ, ಆತನ ಹುಚ್ಚಾಟವನ್ನು ತಡೆಯಲು ಮುಂದಾಗಲಿಲ್ಲ. ಬಳಿಕ ಆತನೇ ಸರ್ಕಾರಿ ಆಸ್ಪತ್ರೆಗೆ ಹೋಗಿ ಚಿಕಿತ್ಸೆಗೆ ದಾಖಲಾಗಿದ್ದಾನೆ ಎಂದು ತಿಳಿದು ಬಂದಿದೆ.