ಭೋಪಾಲ್, ಜು 08 (DaijiworldNews/HR): ಧಾರ್ಮಿಕ ಭಾವನೆಗೆ ಧಕ್ಕೆ ತಂದ ಆರೋಪದ ಕಾರಣದಿಂದ ಲೇಖಕಿ-ಚಲನಚಿತ್ರ ನಿರ್ಮಾಪಕಿ ಲೀನಾ ಮಣಿಮೇಕಲೈ ಅವರ ವಿರುದ್ದ ಹಲವು ಪ್ರಕರಣಗಳನ್ನು ದಾಖಲಾದ ಬಳಿಕ ಲೀನಾ ದೇಶದಿಂದ ಹೊರ ಹೋಗಲು ಪ್ರಯತ್ನಿಸಿದರೆ ಅವರನ್ನು ಬಂಧಿಸಲು ಆದೇಶವನ್ನು ಕಳುಹಿಸಲು ಕೇಂದ್ರಕ್ಕೆ ಪತ್ರ ಬರೆಯುವುದಾಗಿ ಶಿವರಾಜ್ ಸಿಂಗ್ ಚೌಹಾಣ್ ಸರ್ಕಾರ ಹೇಳಿದೆ.
ಲೀನಾ ಮಣಿಮೇಕಲೈ ಅವರು ಸಾಕಷ್ಟು ವಿವಾದ ಸೃಷ್ಟಿ ಮಾಡಿದ್ದು, ಅವರ ಬಂಧನಕ್ಕೆ ಆಗ್ರಹಗಳು ಕೇಳಿ ಬರುತ್ತಿದ್ದು, ಈ ಮಧ್ಯೆ ಅವರ ವಿರುದ್ಧ ಮಧ್ಯಪ್ರದೇಶ ಪೊಲೀಸರು ರಾಜ್ಯ ಗೃಹ ಸಚಿವಾಲಯದ ಆದೇಶದ ಮೇರೆಗೆ ಲುಕ್ಔಟ್ ನೋಟಿಸ್ ಹೊರಡಿಸಿದ್ದಾರೆ.
ಇನ್ನು ಲೀನಾ ಮಣಿಮೇಕಲೈ ಅವರು ತಮ್ಮದೇ ನಿರ್ಮಾಣ ಸಂಸ್ಥೆ ಹೊಂದಿದ್ದು, ಅದರ ಮೂಲಕ ಹಲವು ಪ್ರಯೋಗಗಳನ್ನು ಅವರು ಮಾಡಿದ್ದಾರೆ.
ಜುಲೈ 4ರಂದು ಲೀನಾ ಮಣಿಮೇಕಲೈ ಅವರು ತಮ್ಮ ಸೋಶಿಯಲ್ ಮೀಡಿಯಾ ಖಾತೆಗಳ ಮೂಲಕ 'ಕಾಳಿ' ಪೋಸ್ಟರ್ ಶೇರ್ ಮಾಡಿಕೊಂಡಿದ್ದು, ಪ್ರಚಾರ ಪಡೆಯುವ ಕಾರಣದಿಂದಲೇ ಲೀನಾ ಮಣಿಮೇಕಲೈ ಅವರು ಈ ರೀತಿ ಮಾಡಿದ್ದಾರೆ ಎಂದು ಆರೋಪಿಸಲಾಗಿದೆ.