ಫರಿದಾಬಾದ್ (ಹರಿಯಾಣ), ಜು 08 (DaijiworldNews/DB): ಸ್ನೇಹವನ್ನು ಸಾಬೀತುಪಡಿಸುವ ಕಾರಣಕ್ಕಾಗಿ ಮೂವರು ಸ್ನೇಹಿತರು ಕಾಲುವೆಗೆ ಹಾರಿ ಇಬ್ಬರು ನಾಪತ್ತೆಯಾದ ಘಟನೆ ಹರಿಯಾಣದ ಫರಿದಾಬಾದ್ನಲ್ಲಿ ನಡೆದಿದೆ. ಘಟನೆಯಲ್ಲಿ ಓರ್ವನನ್ನು ರಕ್ಷಿಸಲಾಗಿದೆ.
ಸರಸ್ವತಿ ಕಾಲೋನಿ ನಿವಾಸಿ ಅಮಿತ್ ಗುಪ್ತಾ (24), ಶ್ಯಾಮ್ ಕಾಲೋನಿಯ ನಿವಾಸಿಗಳಾದ ಮೋನು (26) ಮತ್ತು ಸಂಜೀವ್ ಅಲಿಯಾಸ್ ವಿರಾಟ್ (28) ಕಾಲುವೆಗೆ ಹಾರಿದವರು. ಈ ಪೈಕಿ ಮೋನು ಮತ್ತುಸಂಜೀವ್ ನಾಪತ್ತೆಯಾಗಿದ್ದು, ರಾಜ್ಯ ವಿಪತ್ತು ನಿರ್ವಹಣಾ ಪಡೆ (ಎಸ್ಡಿಆರ್ಎಫ್) ತಂಡ ಹುಡುಕಾಟ ನಡೆಸುತ್ತಿದೆ. ಅಮಿತ್ ಗುಪ್ತಾ ಎಂಬಾತನನ್ನು ಸ್ಥಳೀಯರು ರಕ್ಷಿಸಿದ್ದಾರೆ. ಎಂದು ಪೊಲೀಸರು ತಿಳಿಸಿದ್ದಾರೆ.
ಮೂವರೂ ಪಾನಮತ್ತರಾಗಿ ಮದ್ಯದ ಅಮಲಿನಲ್ಲಿ ತಮ್ಮ ನಡುವೆ ಇರುವ ಸ್ನೇಹವನ್ನು ಸಾಬೀತುಪಡಿಸುವ ಸಲುವಾಗಿ ಕಾಲುವೆಗೆ ಹಾರಿದ್ದಾರೆ. ಇದಕ್ಕೂ ಮುನ್ನ ಬಟ್ಟೆ ಮತ್ತು ಮೊಬೈಲ್ ಫೋನ್ಗಳನ್ನು ಪಕ್ಕದಲ್ಲಿ ತೆಗೆದಿಟ್ಟಿದ್ದರು. ಮದ್ಯಪಾನ ಮಾಡುತ್ತಿರುವ ಬಗ್ಗೆ ಪೊಲೀಸರಿಗೆ ಮಾಹಿತಿ ನೀಡಿದ್ದರು ಎಂದು ಪಲ್ಲಾ ಪೊಲೀಸ್ ಠಾಣೆಯ ಇನ್ಸ್ಪೆಕ್ಟರ್ ಯೋಗೇಶ್ ಕುಮಾರ್ ತಿಳಿಸಿದ್ದಾರೆ.