ಅಸ್ಸಾಂ, ಜು 08 (DaijiworldNews/HR): ಹಿಂದೂಗಳು ನಮ್ಮ ಪೂರ್ವಜರು, ಅವರ ಭಾವನೆ ಗೌರವಿಸಿ ಬಕ್ರೀದ್ ಹಬ್ಬದ ದಿನ ಗೋ ಮಾತೆ ಬಲಿಕೊಡಬೇಡಿ ಎಂದು ಆಲ್ ಇಂಡಿಯಾ ಯುನೈಟೆಡ್ ಡೆಮಾಕ್ರಟಿಕ್ ಫ್ರಂಟ್ ಮುಖ್ಯಸ್ಛ ಹಾಗೂ ಅಸ್ಸಾಂ ಸಂಸದ ಬದ್ರುದ್ದೀನ್ ಅಜ್ಮಲ್ ತಮ್ಮ ಸಮುದಾಯಕ್ಕೆ ಮನವಿ ಮಾಡಿದ್ದಾರೆ.
ಈ ಕುರಿತು ಮಾತನಾಡಿರುವ ಅವರು, ಹಿಂದೂಗಳ ಧಾರ್ಮಿಕ ಭಾವನೆಗಳಿಗೆ ಬಕ್ರೀದ್ ಹಬ್ಬದ ಕಾರಣದಲ್ಲಿ ಧಕ್ಕೆಯಾಗಬಾರದು. ಬಲಿ ಕೊಡುವುದು ಬಕ್ರೀದ್ ಹಬ್ಬದ ಭಾಗವಾಗಿದ್ದು, ದನಗಳ ಬಲಿ ಬೇಡ ಅದರ ಬದಲಿಗೆ ಕುರಿ, ಮೇಕೆ, ಒಂಟೆ ಬಲಿ ಕೊಡಿ ಎಂದಿದ್ದಾರೆ.
ಇನ್ನು ಸನಾತನ ಹಿಂದೂ ಧರ್ಮ ದನಗಳನ್ನು ಗೋ ಮಾತೆ ಎಂದು ಪೂಜಿಸುತ್ತದೆ. ದನಗಳ ಬಲಿ ಕೊಡುವುದರಿಂದ ಭಾರತೀಯ ಹಿಂದೂ ಧಾರ್ಮಿಕ ಭಾವನೆಗೆ ಧಕ್ಕೆಯಾಗಲಿ ಎಂದಿದ್ದಾರೆ.
2008ರಲ್ಲಿಇಸ್ಲಾಮ್ ದಾರುಲ್ ಉಲಮ್ ಬಕ್ರೀದ್ ಹಬ್ಬಕ್ಕೆ ಗೋವಿನ ಬಲಿ ಕಡ್ಡಾಯವಲ್ಲ ಎಂದು ಹೇಳಿದ್ದು, ಮುಸ್ಲಿಮ್ ಸಮುದಾಯ ಕಡ್ಡಾಯವಲ್ಲದ ಆಚರಣೆಯನ್ನು ಮುಂದುವರಿಸುವ ಅಗತ್ಯವಿಲ್ಲ ಎಂದು ಹೇಳಿದ್ದಾರೆ.