ತಿರುವನಂತಪುರಂ, ಜು 08 (DaijiworldNews/HR): ಕೇರಳ ಮುಖ್ಯಮಂತ್ರಿ ಪಿಣರಾಯಿ ವಿಜಯನ್ ಅವರು ಸತ್ಯವನ್ನು ಹೊರತರಲು ಪ್ರಯತ್ನಿಸುತ್ತಿರುವ ಕಾರಣ ನನಗೆ ಕಿರುಕುಳ ನೀಡುತ್ತಿದ್ದಾರೆ ಎಂದು ಕೇರಳದ ಚಿನ್ನಾಭರಣ ಕಳ್ಳಸಾಗಣೆ ಪ್ರಕರಣದ ಆರೋಪಿ ಸ್ವಪ್ನಾ ಸುರೇಶ್ ಆರೋಪಿಸಿದ್ದಾರೆ.
ಈ ಕುರಿತು ಮಾತನಾಡಿದ ಸ್ವಪ್ನಾ, 'ಸಾರ್ವಜನಿಕರಿಗೆ ರಕ್ಷಣೆ ನೀಡಬೇಕಾದ ಸಿಎಂ ಈಗ ನನ್ನನ್ನು ಹಸಿವಿನಿಂದ ಸಾಯಿಸುತ್ತಿದ್ದಾರೆ. ಸತ್ಯವನ್ನು ಹೊರತರಲು ನಾನು ಪ್ರಯತ್ನಿಸುತ್ತಿದ್ದೇನೆ. ಆದರೆ ಅವರು ನನಗೆ ಕಿರುಕುಳ ನೀಡುತ್ತಿದ್ದಾರೆ ಎಂದರು.
ಇನ್ನು ಪಿಣರಾಯಿ ವಿಜಯನ್ ಅವರು ತಮ್ಮ ಮಗಳಿಗೆ ಈ ಕೆಲಸ ಮಾಡಲು ಸಾಧ್ಯವಿಲ್ಲ. ಅವರು ನಮ್ಮೆಲ್ಲರನ್ನೂ ಹೆಣ್ಣುಮಕ್ಕಳಂತೆ ಪರಿಗಣಿಸಬೇಕು ಎಂದಿದ್ದಾರೆ.
ಜುಲೈ 5, 2020 ರಂದು ತಿರುವನಂತಪುರಂ ವಿಮಾನ ನಿಲ್ದಾಣದಲ್ಲಿ ಪರೋಕ್ಷ ತೆರಿಗೆ ಮತ್ತು ಕಸ್ಟಮ್ಸ್ ಕೇಂದ್ರೀಯ ಮಂಡಳಿಯು 14.82 ಕೋಟಿ ರೂ. ಮೌಲ್ಯದ 30 ಕಿಲೋಗ್ರಾಂಗಳಷ್ಟು 24-ಕ್ಯಾರೆಟ್ ಚಿನ್ನವನ್ನು ತಿರುವನಂತಪುರಂನಲ್ಲಿರುವ ಯುಎಇ ಕಾನ್ಸುಲೇಟ್ಗೆ ತಲುಪಿಸಲು ಉದ್ದೇಶಿಸಿರುವ ರಾಜತಾಂತ್ರಿಕ ಬ್ಯಾಗ್ನಿಂದ ವಶಪಡಿಸಿಕೊಂಡಿತ್ತು.