ಮುಂಬೈ, ಜು 07 (DaijiworldNews/MS): 2,500 ಕೆಜಿಗೂ ಹೆಚ್ಚು ಗೋಮಾಂಸವನ್ನು ವಶಪಡಿಸಿಕೊಂಡು ಸುಮಾರು 10 ಜನರನ್ನು ಪೊಲೀಸರು ಬಂಧಿಸಿದ ಘಟನೆ ಗುರುವಾರ ಮುಂಬೈ ಉಪನಗರ ಡಿಯೋನಾರ್ನಲ್ಲಿ ನಡೆದಿದೆ.
ಪ್ರಾಣಿ ದಯಾ ಸಂಘಟನೆಯೊಂದು ನೀಡಿದ ಸುಳಿವಿನ ಆಧಾರದ ಮೇಲೆ ಪೊಲೀಸರು ಬೆಳಗ್ಗೆ ಘಾಟ್ಕೋಪರ್-ಮಾನ್ಖುರ್ದ್ ಲಿಂಕ್ ರಸ್ತೆಯಲ್ಲಿ ಕಾರ್ಯ್ಚಾರಣೆ ನಡೆಸಿದ್ದು ಒಂದು ವಾಹನದಿಂದ ಇನ್ನೊಂದು ವಾಹನಕ್ಕೆ ಲೋಡ್ ಮಾಡುತ್ತಿದ್ದಾಗ ದಾಳಿ ನಡೆಸಿ ಮಾಂಸವನ್ನು ವಶಪಡಿಸಿಕೊಂಡಿದ್ದಾರೆ.
ಮೂರು ವಾಹನಗಳನ್ನು ವಶಪಡಿಸಿಕೊಂಡಿದ್ದು, ಮಾಂಸ ಸಾಗಿಸುತ್ತಿದ್ದ 10 ಜನರನ್ನು ಬಂಧಿಸಿದ್ದಾರೆ ಎಂದು ಡಿಯೋನಾರ್ ಪೊಲೀಸ್ ಠಾಣೆಯ ಅಧಿಕಾರಿಗಳು ತಿಳಿಸಿದ್ದಾರೆ.
ಶಫೀಕ್ ತಾಡಾ ಎಂಬಾತನ ಸಹಾಯದಿಂದ ಮಾಲೆಗಾಂವ್ನಿಂದ ಗೋಮಾಂಸವನ್ನು ತರಲಾಗಿದೆ ಮತ್ತು ಸಾಜಿದ್ ಖುರೇಷಿ ಎಂದು ಗುರುತಿಸಲಾದ ವ್ಯಕ್ತಿಗೆ ತಲುಪಿಸಬೇಕಾಗಿತ್ತು ಎಂದು ಅವರು ಹೇಳಿದರು.
ವಶಪಡಿಸಿಕೊಂಡ ಗೋಮಾಂಸದ ಮಾದರಿಗಳನ್ನು ವಿಧಿವಿಜ್ಞಾನ ಪ್ರಯೋಗಾಲಯಕ್ಕೆ ಕಳುಹಿಸಲಾಗುವುದು, ಆರೋಪಿಗಳ ವಿರುದ್ಧ ಭಾರತೀಯ ದಂಡ ಸಂಹಿತೆ (ಐಪಿಸಿ) ಮತ್ತು ಮಹಾರಾಷ್ಟ್ರ ಪ್ರಾಣಿ ಸಂರಕ್ಷಣಾ ಕಾಯ್ದೆ ಮತ್ತು ಪ್ರಾಣಿಗಳ ಮೇಲಿನ ಕ್ರೌರ್ಯ ಕಾಯ್ದೆಯ ಸಂಬಂಧಿತ ಸೆಕ್ಷನ್ಗಳ ಅಡಿಯಲ್ಲಿ ಪ್ರಕರಣ ದಾಖಲಿಸಲಾಗಿದೆ ಎಂದು ಅಧಿಕಾರಿ ತಿಳಿಸಿದ್ದಾರೆ.