ತಿರುವನಂತಪುರ, ಜು 08 (DaijiworldNews/HR): ಮನೆಯಲ್ಲಿಯೇ ಕಚ್ಚಾ ಬಾಂಬ್ ಸ್ಫೋಟಗೊಂಡ ಪರಿಣಾಮ ತಂದೆ ಮತ್ತು ಮಗ ಸಾವನಪ್ಪಿರುವ ಘಟನೆ ಕೇರಳದ ಕಣ್ಣೂರಿನಲ್ಲಿ ನಡೆದಿದೆ.
ಮೃತರನ್ನು ಅಸ್ಸಾಂ ಮೂಲದ ಫೈಝಲ್ ಖಾನ್(45) ಮತ್ತು ಅವರ ಪುತ್ರ ಶಾಹೀದುಲ್(22) ಎಂದು ಗುರುತಿಸಲಾಗಿದೆ.
ಗುಜರಿ ಮಾರಾಟದ ಕೆಲಸ ಮಾಡಿಕೊಂಡಿದ್ದ ಫೈಝಲ್ ಖಾನ್, ತಮಗೆ ದೊರೆತಿದ್ದ ಸ್ಟೀಲ್ ಡಬ್ಬವೊಂದನ್ನು ಮನೆಗೆ ತಂದು ತೆರೆದಾಗ ಅದು ಸ್ಫೋಟಗೊಂಡಿದೆ ಎಂದು ಪೊಲೀಸರು ತಿಳಿಸಿದ್ದಾರೆ.
ಇನ್ನು ಸ್ಫೋಟದಿಂದಾಗಿ ಮನೆಯ ಛಾವಣಿ ಕೂಡ ಛಿದ್ರಗೊಂಡಿದ್ದು, ಸ್ಫೋಟಕದಲ್ಲಿ ಏನು ಬಳಸಲಾಗಿತ್ತು ಮತ್ತು ಅದು ಎಲ್ಲಿಂದ ಲಭ್ಯವಾಗಿತ್ತು ಎನ್ನುವ ಬಗ್ಗೆ ಮಾಹಿತಿ ಲಭ್ಯವಾಗಿಲ್ಲ.