ಛತ್ತೀಸ್ಗಢ, ಜು 08 (DaijiworldNews/HR): ತಂದೆ ಮತ್ತು ತಾಯಿಯನ್ನು ಕಳೆದುಕೊಂಡ 10 ತಿಂಗಳ ಹೆಣ್ಣು ಮಗುವಿಗೆ ಅನುಕಂಪದ ಆಧಾರದ ಮೇಲೆ ರೈಲ್ವೆ ಇಲಾಖೆಯು ನೇಮಕಾತಿ ನೀಡಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಕೆಲಸ ಪಡೆದುಕೊಂಡಿರುವ 10 ತಿಂಗಳ ಹೆಣ್ಣು ಮಗು 18 ವರ್ಷ ವಯಸ್ಸಿನ ನಂತರ ರೈಲ್ವೆ ಇಲಾಖೆಯಲ್ಲಿ ಕೆಲಸ ಮಾಡಬಹುದು ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಮಗುವಿನ ತಂದೆ ರಾಜೇಂದ್ರ ಕುಮಾರ್ ಭಿಲಾಯಿಯ ರೈಲ್ವೆ ಯಾರ್ಡ್ನಲ್ಲಿ ಸಹಾಯಕರಾಗಿ ಕೆಲಸ ಮಾಡುತ್ತಿದ್ದು, ಜೂನ್ 1 ರಂದು ಅವರು ತಮ್ಮ ಪತ್ನಿಯೊಂದಿಗೆ ರಸ್ತೆ ಅಪಘಾತದಲ್ಲಿ ಸಾವನ್ನಪ್ಪಿದರು, ಆದರೆ ಮಗು ಬದುಕುಳಿದಿದ್ದು, ಅನುಕಂಪದ ಆಧಾರದ ಮೇಲೆ ರೈಲ್ವೆ ಇಲಾಖೆಯು ನೇಮಕಾತಿ ನೀಡಿದೆ
ಇನ್ನು ಅವರ ಕುಟುಂಬಕ್ಕೆ ಎಲ್ಲಾ ಸಹಾಯವನ್ನು ರಾಯ್ಪುರ ರೈಲ್ವೆ ವಿಭಾಗವು ಒದಗಿಸಿದ್ದು, ರೈಲ್ವೆ ದಾಖಲೆಗಳಲ್ಲಿ ಅಧಿಕೃತ ನೋಂದಣಿ ಮಾಡಲು ಮಗುವಿನ ಬೆರಳಚ್ಚುಗಳನ್ನು ತೆಗೆದುಕೊಂಡಿದ್ದೇವೆ ಎಂದು ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.