ಬೆಂಗಳೂರು, ಜು 07 (DaijiworldNews/HR): ಮಾನ್ಯ ಮುಖ್ಯಮಂತ್ರಿಗಳೇ, ನಿಮ್ಮ ಸರ್ಕಾರದ ಅಕ್ರಮಗಳು, ಅವಾಂತರಗಳು ಬಯಲಾದಾಗ ಕಾಂಗ್ರೆಸ್ ಮೇಲೆ ಅಪಾದಿಸುವ ಖಯಾಲಿ ಬೆಳೆಸಿಕೊಂಡಿದ್ದೀರಿ. ಈಗ ಅನಗತ್ಯವಾಗಿ ನಮ್ಮ ವಿರುದ್ಧ ಆರೋಪಿಸುತ್ತಿದ್ದೀರಿ ಎಂದು ಬಿಜೆಪಿ ವಿರುದ್ದ ಕಾಂಗ್ರೆಸ್ ಆಕ್ರೋಶ ವ್ಯಕ್ತಪಡಿಸಿದೆ.
ಈ ಕುರಿತು ಟ್ವೀಟ್ ಮಾಡಿರುವ ಕರ್ನಾಟಕ ಸರ್ಕಾರ, ಈಗ ಕಾಂಗ್ರೆಸ್ ವಿರುದ್ದ ಅನಗತ್ಯವಾಗಿ ಆರೋಪಿಸುತ್ತಿದ್ದೀರಲ್ಲ ಮುಖ್ಯಮಂತ್ರಿಗಳೇ, ಆ ಸಂದರ್ಭದಲ್ಲಿ ನಿಮ್ಮ ಪಕ್ಷದವರು ಬಿಲದಲ್ಲಿ ಗೆಣಸು ಕೆರೆಯುತ್ತಿದ್ರಾ ಅಥವಾ ಸದನದಲ್ಲಿ ಬ್ಲೂ ಫಿಲ್ಮ್ ನೋಡ್ತಿದ್ರಾ? ಎಂದು ಪ್ರಶ್ನಿಸಿದೆ.
ಇನ್ನು ಶಿಕ್ಷಣ ಸಚಿವರಾದ ಬಿ.ಸಿ. ನಾಗೇಶ್ ಅವರು ಆರ್ಎಸ್ಎಸ್ನ ಶೋಷಣೆ ಸಿದ್ಧಾಂತದ ವಕ್ತಾರರಂತೆ ವರ್ತಿಸುತ್ತಿದ್ದಾರೆ. ಸರ್ಕಾರಿ ಶಾಲೆಯಲ್ಲಿ ಕಲಿಯುವ ಬಹುತೇಕ ತಳ ಸಮುದಾಯದ ಮಕ್ಕಳನ್ನು ಶಿಕ್ಷಣ ವಂಚಿತರಾಗಿಸಲು ನಾಗಪುರದ ಕೇಂದ್ರ ಕಚೇರಿಯಿಂದ ಸುಪಾರಿ ಪಡೆದಿದ್ದಾರೆ. ಅವರ ಹುನ್ನಾರದಿಂದಲೇ ರಾಜ್ಯದ 10 ಲಕ್ಷ ಮಕ್ಕಳು ಶಿಕ್ಷಣದಿಂದ ದೂರ ಉಳಿಯುವಂತಾಗಿದೆ ಎಂದು ವಾಗ್ದಾಳಿ ನಡೆಸಿದೆ.