ಪತ್ತನಂತಿಟ್ಟ, ಜು 07 (DaijiworldNews/HR): ಸಂವಿಧಾನದ ಕುರಿತು ವಿವಾದಾತ್ಮಕ ಹೇಳಿಕೆ ನೀಡಿರುವ ಆರೋಪದ ಮೇಲೆ ಕೇರಳದ ಶಾಸಕ ಸಜಿ ಚೆರಿಯನ್ ವಿರುದ್ಧ ಎಫ್ಐಆರ್ ದಾಖಲಾಗಿದೆ.
ಸಜಿ ಚೆರಿಯನ್ ಅವರು ವಿರೋಧ ಪಕ್ಷ ಸೇರಿದಂತೆ ಸಮಾಜದ ವಿವಿಧ ವಲಯಗಳಿಂದ ಬಂದ ಒತ್ತಡದಿಂದಾಗಿ ಬುಧವಾರ ಸಚಿವ ಸ್ಥಾನಕ್ಕೆ ರಾಜೀನಾಮೆ ಸಲ್ಲಿಸಿದ್ದರು.
ಇನ್ನು ಪತ್ತನಂತಿಟ್ಟ ಜಿಲ್ಲೆಯ ನ್ಯಾಯಾಲಯದ ನಿರ್ದೇಶನದಂತೆ ಕೀಳ್ವೈಪುರ ಪೊಲೀಸ್ ಠಾಣೆಯಲ್ಲಿ, ಸೆಕ್ಷನ್ 2, ರಾಷ್ಟ್ರೀಯ ಗೌರವಕ್ಕೆ ಅವಮಾನ ತಡೆ ಕಾಯ್ದೆ ಅಡಿಯಲ್ಲಿ ಪ್ರಕರಣ ದಾಖಲಿಸಲಾಗಿದೆ.
ಈ ಕಾಯ್ದೆ ಪ್ರಕಾರ, ಗರಿಷ್ಠ ಮೂರು ವರ್ಷಗಳ ಜೈಲು ಶಿಕ್ಷೆ ಅಥವಾ ದಂಡ ಅಥವಾ ಎರಡನ್ನೂ ಒಳಗೊಂಡಿರುತ್ತದೆ.