ಮುಂಬೈ, ಜು 07 (DaijiworldNews/MS): ಮುಖ್ಯಮಂತ್ರಿ ಏಕನಾಥ್ ಶಿಂಧೆ ಬಣಕ್ಕೆ ಥಾಣೆಯ 66 ಶಿವಸೇನೆ ಕಾರ್ಪೊರೇಟರ್ಗಳು ಗುರುವಾರ ಸೇರ್ಪಡೆಗೊಂಡಿದ್ದು, ಇದು ಮಾಜಿ ಸಿಎಂ ಉದ್ಧವ್ ಠಾಕ್ರೆ ಅವರಿಗೆ ಮತ್ತೊಂದು ದೊಡ್ಡ ಹಿನ್ನಡೆಯಾಗಿದೆ.
ಶಿವಸೇನೆಯು ಪ್ರಸ್ತುತ ಎರಡು ಬಣಗಳಾಗಿ ವಿಭಜಿಸಲ್ಪಟ್ಟಿದ್ದು, ಉದ್ಧವ್ ಠಾಕ್ರೆ ಮತ್ತು ಬೆಂಬಲಿಗರು ಒಂದು ಬಣವಾಗಿದ್ರೆ ಇನ್ನೊಂದರ ನೇತೃತ್ವವನ್ನು ಏಕನಾಥ್ ಶಿಂಧೆ ಅವರು ವಹಿಸಿಕೊಂಡಿದ್ದಾರೆ. ಶಿಂಧೆ ಅವರು ಇತ್ತೀಚೆಗೆ ಶಿವಸೇನೆ ಮುಖ್ಯಸ್ಥ ಉದ್ಧವ್ ಠಾಕ್ರೆ ವಿರುದ್ಧ ಬಂಡಾಯವೆದ್ದು ಬಿಜೆಪಿಯೊಂದಿಗೆ ಸರ್ಕಾರವನ್ನು ರಚಿಸಿದ್ದಾರೆ.
ಇನ್ನು ಇಂದು ನಡೆದ ಮಹತ್ವದ ಬೆಳವಣಿಗೆಯಲ್ಲಿ ಶಿಂಧೆ ಬಣ ತಂತ್ರ ಫಲಕಾರಿಯಾಗಿದ್ದು 66 ಶಿವಸೇನೆ ಕಾರ್ಪೊರೇಟರ್ಗಳು ಬಂಡಾಯ ಬಣದೊಂದಿಗೆ ಕೈ ಜೋಡಿಸಿ ಗುಂಪನ್ನು ಮತ್ತಷ್ಟು ಬಲಶಾಲಿಯಾಗಿಸಿದ್ದಾರೆ. ಈ ಮೂಲಕ ಏಕನಾಥ್ ಅವರು ಸಿವಸೇನೆ ಪಕ್ಷದ ಮೇಲೆ ಸಂಪೂರ್ಣ ಹಿಡಿದ ಸಾಧಿಸಲಿದ್ದಾರೆಯೇ ಎಂಬ ಪ್ರಶ್ನೆ ಉದ್ಬವಿಸಿದೆ
ಇನ್ನೊಂದೆಡೆ ಥಾಣೆಯೂ ಶಿಂಧೆಯ ಭದ್ರಕೋಟೆಯಾಗಿದ್ದು ಹೀಗಾಗಿ ಕಾರ್ಪೊರೇಟರ್ಗಳು ಶಿಂಧೆ ಅವರನ್ನು ಬೆಂಬಲಿಸಿರುವುದರಲ್ಲಿ ಅಚ್ಚರಿ ಏನಿಲ್ಲ.