ಬೆಂಗಳೂರು, ಜು 07 (DaijiworldNews/HR): ಸಚಿವ ಅಶ್ವಥ್ ನಾರಾಯಣ ಅವರು ಶ್ರೀನಗರದ ಯಧುಗಿರಿ ಯತಿರಾಜ ಮಠದ ವತಿಯಿಂದ ನಡೆಯುತ್ತಿರುವ ರಾಮಾನುಜಾಚಾರ್ಯರ ಪ್ರತಿಮೆ ಅನಾವರಣ ಕಾರ್ಯಕ್ರಮಕ್ಕೆ ಭಾಗವಹಿಸಲು ತೆರಳಿದ್ದಾರೆ.
ಬುಧವಾರ ರಾತ್ರಿ ದೆಹಲಿಗೆ ಬಂದಿಳಿದ ಅಶ್ವಥ್ ನಾರಾಯಣ ಇಂದು ಬೆಳಗ್ಗೆ ಶ್ರೀನಗರಕ್ಕೆ ತೆರಳಿದ್ದಾರೆ. ಆದರೆ ಹೈಕಮಾಂಡ್ ನಿಂದ ಬುಲಾವ್ ಬಂದಿದ್ದು, ಅಶ್ವಥ್ ನಾರಾಯಣ ಅವರು ಹೋಗಿದ್ದಾರೆ ಎಂದು ಆರೋಪಿಸಲಾಗಿತ್ತು.
ಈ ಬಗ್ಗೆ ಪ್ರತಿಕ್ರಿಯೆ ನೀಡಿದ ಅಶ್ವಥ್ ನಾರಾಯಣ, ನಾನು ಹೈಕಮಾಂಡ್ ಭೇಟಿ ಮಾಡಲು ದೆಹಲಿಗೆ ಹೋಗಿಲ್ಲ. ಪೂರ್ವ ನಿಗದಿಯಾಗಿರುವ ಶ್ರೀನಗರದ ಕಾರ್ಯಕ್ರಮದಲ್ಲಿ ಭಾಗವಹಿಸಲು ತೆರಳಿದ್ದೇನೆ ಎಂದಿದ್ದಾರೆ.